Sunday, 15th December 2024

ಕೊರೋನಾ ಸೋಂಕಿಗೆ ಲಸಿಕೆ ಸಿದ್ದತೆ ಕುರಿತು ವಿಜ್ಞಾನಿಗಳಿಗೆ ಭೇಷ್ ಎಂದ ಪ್ರಧಾನಿ ಮೋದಿ

ನವದೆಹಲಿ/ಹೈದರಾಬಾದ್: ಕೊರೋನಾ ಸೋಂಕನ್ನು ಗುಣಪಡಿಸಬಲ್ಲ ಲಸಿಕೆ ತಯಾರಿಸುತ್ತಿರುವ ಮೂರು ಕೇಂದ್ರ ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ನ.28) ಭೇಟಿ ನೀಡಿ ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿದರು.

ಬೆಳಗ್ಗೆ ಅಹಮದಾಬಾದ್ ನ ಜೈಡಸ್ ಕಂಪನಿಗೆ, ನಂತರ ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆಗೆ ಭೇಟಿ ನೀಡಿದ್ದರು. ಅಹಮದಾಬಾದ್ ನ ಜೈಡಸ್ ಕಂಪನಿಗೆ ಭೇಟಿ ನೀಡಿದ್ದ ಪ್ರಧಾನಿ, ಲಸಿಕೆ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.

ಅಹಮದಾಬಾದ್ ನ ಚಾಂಗೋದಾರ್ ಕೈಗಾರಿಕಾ ಪ್ರದೇಶದಲ್ಲಿನ ಜೈಡಸ್ ಕ್ಯಾಡಿಲಾ ಸಂಶೋಧನಾ ಕೇಂದ್ರಕ್ಕೆ ಪ್ರಧಾನಿ ಪಿಪಿಇ ಕಿಟ್ ಧರಿಸಿ ಭೇಟಿ ನೀಡಿ ದ್ದರು.

ಕೋವಿಡ್ 19 ಸೋಂಕಿನ ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ಆಗಸ್ಟ್ ನಲ್ಲಿ ನಡೆಯಲಿದೆ ಎಂದು ಜೈಡಸ್ ಘೋಷಿಸಿದೆ.

ಹೈದರಾಬಾದ್ ನ ಭಾರತ್ ಬಯೋಟೆಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕೋವಿಡ್ 19 ದೇಶಿ ಲಸಿಕೆ ಕುರಿತು ಮಾಹಿತಿ ಪಡೆದರು. ಅಲ್ಲದೇ ಈವರೆಗೆ ನಡೆದ ಬೆಳವಣಿಗೆ ಕುರಿತಂತೆ ವಿಜ್ಞಾನಿಗಳನ್ನು ಅಭಿನಂದಿಸಿದರು. ಐಸಿಎಂಆರ್ ಜತೆ ಕೈಜೋಡಿಸುವ ಮೂಲಕ ಲಸಿಕೆ ಶೀಘ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.