Friday, 22nd November 2024

PM Modi Birthday: ಪ್ರಧಾನಿ ಮೋದಿ ಕುರಿತ 10 ಕುತೂಹಲಕಾರಿ ಸಂಗತಿಗಳಿವು!

PM Modi Birthday

ಗುಜರಾತ್‌ನ (Gujarat) ಸಣ್ಣ ಪಟ್ಟಣದಿಂದ ರಾಜ್ಯದ ಮುಖ್ಯಮಂತ್ರಿಯಾಗಿ (Chief Minister of Gujarat), ದೇಶದ ಪ್ರಧಾನ ಮಂತ್ರಿಯಾಗುವವರೆಗೆ (Prime Minister of India) ನರೇಂದ್ರ ಮೋದಿ (PM Modi) ಅವರ ಬದುಕಿನ ಪಯಣವು ಸಾಕಷ್ಟು ಮಂದಿಗೆ ಸ್ಫೂರ್ತಿ ನೀಡುವಂತಿದೆ. ಸೆಪ್ಟೆಂಬರ್ 17ರಂದು ತಮ್ಮ 74ನೇ ಹುಟ್ಟುಹಬ್ಬವನ್ನು (PM Modi Birthday) ಆಚರಿಸಿಕೊಳ್ಳಲಿರುವ ಅವರ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

  • 1950ರ ಸೆಪ್ಟೆಂಬರ್ 17ರಂದು ಜನಿಸಿದ ನರೇಂದ್ರ ದಾಮೋದರದಾಸ ಮೋದಿಯವರು 2001ರಿಂದ 2014ರವರೆಗೆ ಮೂರು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ದೇಶದ 14ನೇ ಪ್ರಧಾನ ಮಂತ್ರಿಯಾಗಿದ್ದಾರೆ.
PM Modi Birthday
  • ವಿಶ್ವದ ಅತ್ಯಂತ ಪ್ರಭಾವಿ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಪ್ರಧಾನಿ ಮೋದಿಯವರ ಜನ್ಮದಿನವನ್ನು ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ವರ್ಷ ಅಜ್ಮೀರ್ ಷರೀಫ್ ದರ್ಗಾವು ಸೆಪ್ಟೆಂಬರ್ 17ರಂದು 4000 ಕೆ.ಜಿ. ಸಸ್ಯಾಹಾರಿ ಉಪಾಹಾರವನ್ನು ವಿತರಿಸಲಿದೆ. ಇದಕ್ಕಾಗಿ ಅಜ್ಮೀರ್ ದರ್ಗಾ ಶರೀಫ್‌ನಲ್ಲಿರುವ ಐತಿಹಾಸಿಕ ಮತ್ತು ವಿಶ್ವಪ್ರಸಿದ್ಧ “ಬಿಗ್ ಶಾಹಿ ದೇಗ್” ಅನ್ನು ಬಳಸಲಾಗುತ್ತದೆ. ಇದರಲ್ಲಿ 4000 ಕೆ.ಜಿ. ಸಸ್ಯಾಹಾರಿ ಖಾದ್ಯಗಳನ್ನು ತಯಾರಿಸಲಾಗುತ್ತದೆ ಎಂದು ದರ್ಗಾ ಅಧಿಕಾರಿಗಳು ಹೇಳಿದ್ದಾರೆ.
PM Modi Birthday

ಪ್ರಧಾನಿ ಮೋದಿಯವರ ಕುರಿತು ಹತ್ತು ಪ್ರಮುಖ ಸಂಗತಿಗಳು

PM Modi Birthday: 800 ಕೆಜಿ ಧಾನ್ಯದಲ್ಲಿ ಅರಳಿದ ಮೋದಿ ಚಿತ್ರ; 13 ವರ್ಷದ ಬಾಲಕಿ ಸಾಧನೆಗೆ ವಿಶ್ವ ದಾಖಲೆ ಗರಿ

  1. ಮೋದಿ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಗುಜರಾತ್‌ನ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದರು.
  2. ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿಯಾಗಿದ್ದಾರೆ ನರೇಂದ್ರ ಮೋದಿ.
  3. ಗುಜರಾತಿನ ವಡ್ನಗರದ ಗಾಣಿಗ ಸಮುದಾಯದ ಕುಟುಂಬದಲ್ಲಿ ಜನಿಸಿದ ಮೋದಿ ಬಾಲ್ಯದಲ್ಲಿ ಸ್ಥಳೀಯ ರೈಲು ನಿಲ್ದಾಣದಲ್ಲಿ ಟೀ ಮಾರಲು ತಂದೆಗೆ ಸಹಾಯ ಮಾಡುತ್ತಿದ್ದರು.
  4. ಎಂಟನೇ ವಯಸ್ಸಿನಲ್ಲಿ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ತಿಳಿದುಕೊಂಡರು. ಬಳಿಕ ಉಪನ್ಯಾಸ, ತರಬೇತಿ ಅವಧಿಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಆರ್‌ಎಸ್‌ಎಸ್‌ ಹಿರಿಯ ನಾಯಕ ಲಕ್ಷ್ಮಣ ರಾವ್ ಇನಾಮದಾರ್ ಅವರನ್ನು ಭೇಟಿಯಾದದ ಅವರು ಆರ್ ಎಸ್ ಎಸ್ ನಲ್ಲಿ ಜೂನಿಯರ್ ಕೆಡೆಟ್ ಆಗಿ ಸೇರ್ಪಡೆಗೊಂಡರು. ಬಳಿಕ ಅವರ ಬಳಿ ಮಾರ್ಗದರ್ಶನ ಪಡೆಯಲು ಪ್ರಾರಂಭಿಸಿದರು.
  5. 1967ರಲ್ಲಿ ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸಿದ ಮೋದಿ 1978ರಲ್ಲಿ ರಾಜಕೀಯ ವಿಜ್ಞಾನದಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪೂರ್ಣಗೊಳಿಸಿದರು. 1982ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು.
  6. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭೂಗತರಾಗಿದ್ದ ಮೋದಿ ಗುಜರಾತಿ ಭಾಷೆಯಲ್ಲಿ ಅಂದಿನ ಘಟನೆಗಳನ್ನು ಅನುಕ್ರಮವಾಗಿಟ್ಟುಕೊಂಡು ಪುಸ್ತಕವೊಂದನ್ನು ಬರೆದಿದ್ದಾರೆ.
  7. 1971ರ ಯುದ್ಧದ ಅನಂತರ ಮೋದಿ ಅವರು ಆರ್ ಎಸ್ ಎಸ್ ನ ಪೂರ್ಣ ಸಮಯದ ಪ್ರಚಾರಕರಾದರು. 1985ರಲ್ಲಿ ಅವರನ್ನು ಬಿಜೆಪಿಗೆ ನಿಯೋಜಿಸಲಾಯಿತು.
  8. ಪಿಎಂ ಮೋದಿಯವರು ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ದೃಢವಾಗಿ ಅನುಸರಿಸುತ್ತಾರೆ. ಬೇಲೂರು ಮಠ, ಅದ್ವೈತ ಆಶ್ರಮ ಮತ್ತು ರಾಮಕೃಷ್ಣ ಮಿಷನ್ ಸೇರಿದಂತೆ ವಿವೇಕಾನಂದರು ಸ್ಥಾಪಿಸಿದ ಆಶ್ರಮಗಳಿಗೆ ನಿರಂತರ ಭೇಟಿ ನೀಡುತ್ತಾರೆ.
  9. 2014ರ ಫೋರ್ಬ್ಸ್ ಮ್ಯಾಗಜೀನ್ ಅತ್ಯಂತ ಪ್ರಭಾವ ಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಪಿಎಂ ಮೋದಿ 15ನೇ ಸ್ಥಾನದಲ್ಲಿದ್ದಾರೆ. ಅದೇ ವರ್ಷದಲ್ಲಿ, ಅವರು ಟೈಮ್ ಮ್ಯಾಗಜೀನ್‌ನಿಂದ ವರ್ಷದ ವ್ಯಕ್ತಿ ಸ್ಥಾನವನ್ನು ಪಡೆದರು. 2014, 2015 ಮತ್ತು 2017ರಲ್ಲಿ ಟೈಮ್ ನಿಯತಕಾಲಿಕದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಅವರನ್ನು ಹೆಸರಿಸಲಾಗಿದೆ.
  10. ಸಾಮಾಜಿಕ ಮಾಧ್ಯಮದಲ್ಲಿ 90 ಮಿಲಿಯನ್‌ಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಪಿಎಂ ಮೋದಿ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರಮುಖ ವ್ಯಕ್ತಿಯಾಗಿದ್ದಾರೆ.