Thursday, 19th September 2024

PM Modi Birthday: ಇಂದು 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ  ಪ್ರಧಾನಿ ಮೋದಿ; ಅವರ ರಾಜಕೀಯ ಜೀವನದ ಹಿನ್ನೋಟ ಇಲ್ಲಿದೆ

PM Modi Birthday

ಪ್ರಧಾನಿ ನರೇಂದ್ರ ಮೋದಿಯವರು ಇಂದು (ಸೆಪ್ಟೆಂಬರ್ 17ರಂದು) 74ನೇ ಜನುಮ ದಿನವನ್ನು(PM Modi Birthday) ಆಚರಿಸಿಕೊಳ್ಳಲಿದ್ದಾರೆ. ಉತ್ತರ ಗುಜರಾತ್‌ನ (North Gujarat) ಮೆಹ್ಸಾನಾ ಜಿಲ್ಲೆಯ ವಡ್ನಗರ ಎಂಬ ಸಣ್ಣ ಪಟ್ಟಣದಲ್ಲಿ 1950ರಲ್ಲಿ ಜನಿಸಿದ ಮೋದಿಯವರು ತಮ್ಮ ರಾಜಕೀಯ ಜೀವನದಲ್ಲಿ (Political life) ಹಲವು ಪ್ರಮುಖ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಅವುಗಳ ಹಿನ್ನೋಟವನ್ನು ಇಲ್ಲಿ ಕೊಡಲಾಗಿದೆ.

1965
ಅಹಮದಾಬಾದ್‌ನಲ್ಲಿ ಜನಸಂಘ ಪಕ್ಷದ ಕಂಕಾರಿಯಾ ವಾರ್ಡ್ ಕಾರ್ಯದರ್ಶಿಯಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಮೋದಿ.

1972
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು. ಅದರ ವಿದ್ಯಾರ್ಥಿಗಳ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಘಟಕವನ್ನು ಸ್ಥಾಪಿಸಿದರು.

PM Modi Birthday

1974
ನವನಿರ್ಮಾಣ ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತೃತ್ವ ವಹಿಸಿದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧ ಗುಜರಾತ್‌ನಲ್ಲಿ ಪ್ರತಿರೋಧ ಸಂಘಟಿಸುವ ಆರ್‌ಎಸ್‌ಎಸ್ ಅಡಿಯ ಗುಜರಾತ್ ಲೋಕ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.

1987
ಬಿಜೆಪಿ ಸೇರಿ ದೇಶ ರಾಜಕಾರಣದೊಳಗೆ ಪ್ರವೇಶಿಸಿದರು. ಒಂದು ವರ್ಷದೊಳಗೆ ಗುಜರಾತ್ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1990
1998ರಲ್ಲಿ ಆಗಿನ ಬಿಜೆಪಿ ಮುಖ್ಯಸ್ಥ ಎಲ್.ಕೆ. ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯೆ ರಥಯಾತ್ರೆಯನ್ನು ಮೋದಿ ಸಂಘಟಿಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 1991ರಲ್ಲಿ ಅಂದಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್‌ ಜೋಶಿ ನೇತೃತ್ವದ ಪಾದಯಾತ್ರೆಯನ್ನು ಮೋದಿ ಆಯೋಜಿಸಿದರು.

1995
ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಲ್ಲಿ ತನ್ನ ಭದ್ರಕೋಟೆಯನ್ನು ಸ್ಥಾಪಿಸಿತು. ಆಗ ಮೋದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು. 1998ರಲ್ಲಿ ಪ್ರಧಾನ ಕಾರ್ಯದರ್ಶಿಯಾದ ಅವರು 2001ರವರೆಗೆ ಆ ಸ್ಥಾನವನ್ನು ಹೊಂದಿದ್ದರು.

PM Modi Birthday

2001
ಗುಜರಾತ್‌ನ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರ ಸ್ಥಾನಕ್ಕೆ ಮೋದಿಯವರ ಹೆಸರು ಕೇಳಿ ಬಂತು. ಉಪಮುಖ್ಯಮಂತ್ರಿ ಸ್ಥಾನಕ್ಕೆ ಮೋದಿಯನ್ನು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇಮಿಸಿದ್ದರು. ಆದರೆ ಇದನ್ನು ಮೋದಿ ನಿರಾಕರಿಸಿದರು. 2001ರ ಅಕ್ಟೋಬರ್ 7ರಂದು ಮುಖ್ಯಮಂತ್ರಿಯಾಗಿ ಮೋದಿ ಪ್ರಮಾಣ ವಚನ ಸ್ವೀಕರಿಸಿದರು. 2002ರ ಫೆಬ್ರವರಿ 24ರಂದು ನಡೆದ ಉಪಚುನಾವಣೆಯಲ್ಲಿ ಅವರು ಶಾಸಕರಾಗಿ ಆಯ್ಕೆಯಾದರು.

2002
2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ಹತ್ಯಾಕಾಂಡ ಪ್ರಕರಣ ಬಳಿಕ ಭುಗಿಲೆದ್ದ ಕೋಮು ಗಲಭೆಗೆ ಸಂಬಂಧಿಸಿ ಮೋದಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ವಿಶೇಷ ತನಿಖಾ ತಂಡ ತನಿಖೆ ನಡೆಸಿತು. ಅನಂತರ ಸುಪ್ರೀಂ ಕೋರ್ಟ್ ಮೋದಿ ನಿರ್ದೋಷಿ ಎಂದು ಸಾರಿತು.

PM Modi Birthday

2005
ಗೋಧ್ರಾ ಹತ್ಯಾಕಾಂಡ ಬಳಿಕದ ಗಲಭೆಗಳಲ್ಲಿ ಮೋದಿ ಪಾತ್ರದ ಬಗ್ಗೆ ಬ್ರಿಟನ್‌ ಟೀಕಿಸಿತು. ಬಳಿಕ ಅಮೆರಿಕ ಕೂಡ 2005ರಲ್ಲಿ ರಾಜತಾಂತ್ರಿಕ ವೀಸಾವನ್ನು ನಿರಾಕರಿಸಿತು.

2002-2012
2002ರ ಡಿಸೆಂಬರ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 127 ಸ್ಥಾನಗಳೊಂದಿಗೆ ಗುಜರಾತ್ ಚುನಾವಣೆಯನ್ನು ಬಿಜೆಪಿ ಭರ್ಜರಿಯಾಗಿ ಗೆದ್ದುಕೊಂಡಿತು. 2007ರಲ್ಲಿ 117 ಮತ್ತು 2012ರಲ್ಲಿ 115 ಸ್ಥಾನಗಳನ್ನು ಪಡೆಯಿತು. ತಮ್ಮ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಮೋದಿ ದೇಶಾದ್ಯಂತ ಪ್ರಶಂಸೆಗೆ ಪಾತ್ರರಾದರು.

2014

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರು ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಪ್ರತಿಷ್ಠಿತ ಟೈಮ್ ಮ್ಯಾಗಜೀನ್ ಓದುಗರ ಸಮೀಕ್ಷೆಯಲ್ಲಿ ಮೋದಿ ಜಾಗತಿಕ ನಂ. ಒನ್‌ ನಾಯಕರಾಗಿ ಹೊರ ಹೊಮ್ಮಿದರು. ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂಬ ಘೋಷಣೆಯೊಂದಿಗೆ ಬಿಜೆಪಿ ಮೋದಿ ಪರ ಪ್ರಚಾರ ನಡೆಸಿತು. ಅಂತಿಮವಾಗಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 282 ಬಹುಮತದ ಸ್ಥಾನಗಳನ್ನು ಗೆದ್ದುಕೊಂಡಿತು. ಮೋದಿ ತಮ್ಮ ಎರಡೂ ಕ್ಷೇತ್ರಗಳಾದ ವಡೋದರಾ ಮತ್ತು ವಾರಣಾಸಿಯಲ್ಲಿ ಭಾರಿ ಮತಗಳ ಅಂತರದಿಂದ ಚುನಾವಣೆ ಗೆದ್ದರು.

PM Modi Birthday

2014-2019

ಸಾಮಾಜಿಕ, ಆರ್ಥಿಕ ಅಭಿವೃದ್ದಿಗಾಗಿ ಅನೇಕ ದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದರು. 2015ರಲ್ಲಿ ಪಾಕಿಸ್ತಾನಕ್ಕೆ ದಿಢೀರ್ ಭೇಟಿ ಕೊಟ್ಟು ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದರು.
ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿ ಗುರುತಿಸಿಕೊಂಡರು.

2016ರ ನವೆಂಬರ್ 8ರಂದು ಎಲ್ಲಾ 500 ಮತ್ತು 1000 ರೂ ನೋಟುಗಳಿಗೆ ನಿಷೇಧ ಹೇರಿ ಆರ್ಥಿಕ ಸುಧಾರಣೆಗೆ ಮಹತ್ವದ ಹೆಜ್ಜೆಯನ್ನು ಇಟ್ಟರು ಮತ್ತು 2017ರ ಜುಲೈ 1ರಂದು ಜಿಎಸ್ ಟಿ ಪರಿಚಯಿಸಿ ‘ಒಂದು ರಾಷ್ಟ್ರ, ಒಂದು ತೆರಿಗೆ’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು. 2018ರ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯನ್ನು ಲೋಕಾರ್ಪಣೆ ಗೊಳಿಸಿದರು.

2019

543 ಸದಸ್ಯರ ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 353 ಸ್ಥಾನಗಳನ್ನು ಗೆದ್ದಿತು. ಮೋದಿ ತಮ್ಮ ವಾರಣಾಸಿ ಕ್ಷೇತ್ರವನ್ನು ಗೆದ್ದರು. 2019ರ ಮೇ 30ರಂದು ಭಾರತ ಮತ್ತು ವಿದೇಶಗಳ ಸುಮಾರು 800 ಪ್ರತಿನಿಧಿಗಳ ಸಮ್ಮುಖದಲ್ಲಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಕಾಶ್ಮೀರದಲ್ಲಿನ 370ನೇ ವಿಧಿ ರದ್ದು, ತ್ರಿವಳಿ ತಲಾಖ್ ಗೆ ಸಂಬಂಧಿಸಿ ಕಾನೂನು ಮತ್ತು ಭಯೋತ್ಪಾದನಾ ವಿರೋಧಿ ಕಠಿಣ ಕಾನೂನು ಜಾರಿಗೊಳಿಸಿದರು. ಇದು ಅವರ ಅಧಿಕಾರಾವಧಿಯ ಮೊದಲ 100 ದಿನಗಳಲ್ಲಿ ಜಾರಿಗೆ ಬಂದ ಮಹತ್ವದ ಬದಲಾವಣೆಗಳು.

PM Modi Birthday: 800 ಕೆಜಿ ಧಾನ್ಯದಲ್ಲಿ ಅರಳಿದ ಮೋದಿ ಚಿತ್ರ; 13 ವರ್ಷದ ಬಾಲಕಿ ಸಾಧನೆಗೆ ವಿಶ್ವ ದಾಖಲೆ ಗರಿ

PM Modi Birthday

2024
2024ರ
ಜೂನ್ 9ರಂದು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದರು.