Thursday, 19th September 2024

PM Modi Birthday: ಪ್ರಧಾನಿ ಮೋದಿ ಬರ್ತ್‌ಡೇಗೆ ಅಜ್ಮೀರ್‌ ದರ್ಗಾದಲ್ಲಿ 4000 ಕೆ.ಜಿ ಸಸ್ಯಾಹಾರ ಅನ್ನದಾಸೋಹ

Narendra Modi

ಅಜ್ಮೀರ್‌: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಹುಟ್ಟುಹಬ್ಬ(PM Modi Birthday)ಕ್ಕೆ ಇನ್ನೇನು ಕೆಲವೇ ದಿನಗಳ ಬಾಕಿ ಇವೆ. ಮೋದಿಯ ಕೋಟ್ಯಂತರ ಅಭಿಮಾನಿಗಳು ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಿ ಸಂಭ್ರಮಿಸುತ್ತಾರೆ. ಇದೀಗ ನರೇಂದ್ರ ಮೋದಿಯವರ 74ನೇ ಜನ್ಮದಿನದ ಹಿನ್ನೆಲೆ ಅಜ್ಮೀರ್ ಷರೀಫ್ ದರ್ಗಾ(Ajmer Sharif Dargah)ವು ಸೆಪ್ಟೆಂಬರ್ 17 ರಂದು 4000 ಕೆ.ಜಿ ಸಸ್ಯಾಹಾರಿ ಲಂಗರ್(ಔತಣಕೂಟ) ಆಯೋಜಿಸಿದೆ.

ಈ ಕುರಿತು ದರ್ಗಾದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆ ಬೃಹತ್‌ ಲಂಗಾರ್‌ ಅಥವಾ ಅನ್ನದಾಸೋಹ ಆಯೋಜಿಸಲಾಗಿದೆ. ಈ ಭೋಜನದಲ್ಲಿ ಅಕ್ಕಿ, ಶುದ್ಧ ತುಪ್ಪ, ಡ್ರೈಫ್ರುಟ್ಸ್‌ಗಳನ್ನು ಒಳಗೊಂಡಿರುತ್ತದೆ. . ಇದನ್ನು ಹಲವಾರು ಭಕ್ತರಿಗೆ ಮತ್ತು ಬಡವರಿಗೆ ದಾನ ಮಾಡಲಾಗುವುದು ಎಂದು ಹೇಳಿದ್ದಾರೆ.

ದರ್ಗಾ ಅಧಿಕಾರಿಗಳ ಪ್ರಕಾರ, ಇಡೀ ಕಾರ್ಯಕ್ರಮವು ಅವರ ‘ಸೇವಾ ಪಖ್ವಾಡಾ’ ಆಚರಣೆಯ ಭಾಗವಾಗಿದೆ. ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ದರ್ಗಾದ 550 ವರ್ಷಗಳ ಹಿಂದಿನ ಸಂಪ್ರದಾಯವನ್ನು ಹೊಂದಿರುವ ಪ್ರಸಿದ್ಧ ‘ಬಿಗ್ ಶಾಹಿ ದೇಗ್’ ನಲ್ಲಿ ಲಂಗರ್ ಅನ್ನು ತಯಾರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ, ಏಕತೆ ಮತ್ತು ಯೋಗಕ್ಷೇಮಕ್ಕಾಗಿ ದರ್ಗಾ ವಿಶೇಷ ಪ್ರಾರ್ಥನೆಗಳನ್ನು ಸಹ ಮಾಡುತ್ತದೆ.

ಇಂಡಿಯನ್ ಮೈನಾರಿಟಿ ಫೌಂಡೇಶನ್ ಮತ್ತು ಚಿಸ್ತಿ ಫೌಂಡೇಶನ್ ಈ ಅನ್ನ ದಾಸೋಹವನ್ನು ಅನ್ನು ಆಯೋಜಿಸುತ್ತದೆ. ಹಜ್ರಾತ್​ ಖ್ವಾಜಾ ಮುಯುನುದ್ದೀನ್​ ಚಿಸ್ತಿ ದರ್ಗಾದೊಳಗೆ ರಾತ್ರಿ 10.30ಕ್ಕೆ ದೊಡ್ಡದಾದ ಶಾಹಿ ದೆಗ್ (ಅಡುಗೆ ಪಾತ್ರೆ)​​ ಅನ್ನು ಬೆಳಗುವ ಮೂಲಕ ಕಾರ್ಯಕ್ರಮ ಆರಂಭಿಸಲಾಗುವುದು. ಇದಕ್ಕೂ ಮುನ್ನ ಹಲವಾರು ಸ್ವಯಂಸೇವಕರು ಮತ್ತು ಭಕ್ತರಿಂದ ಕುರಾನ್ ಪಠಣೆ, ಕವ್ವಾಲಿ ಕಾರ್ಯಕ್ರಮ ನಡೆಯಲಿವೆ.

ಶಾಹಿ ದೇಗ್‌ ಎಂದರೇನು?

ದರ್ಗಾದಲ್ಲಿರುವ ಬಿಗ್ ಶಾಹಿ ದೆಗ್​​ ವಿಶ್ವ-ಪ್ರಸಿದ್ಧ, ಐತಿಹಾಸಿಕ ಅಡುಗೆ ಪಾತ್ರೆಯಾಗಿದ್ದು, ಇದು 4 ಸಾವಿರ ಕೆಜಿಯಷ್ಟು ಆಹಾರ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಸಾಮೂಹಿಕ ಭೋಜನಕ್ಕಾಗಿ ಹಲವು ಶತಮಾನದಿಂದ ಈ ಪಾತ್ರೆಯನ್ನು ಅಲ್ಲಿ ಬಳಸಲಾಗುತ್ತಿದೆ. ಈ ಅಡುಗೆ ಪ್ರಕ್ರಿಯೆಯು ರಾತ್ರಿಯಿಡಿ ಸಾಗಲಿದೆ. ಈ ವೇಳೆ ರಾತ್ರಿ ಇಡೀ ಭಕ್ತರು ಮತ್ತು ಸ್ವಯಂ ಕಾರ್ಯಕರ್ತರು ಪ್ರಾರ್ಥನೆ ಮತ್ತು ದೇವರ ಸ್ಮರಣೆ ಗೀತೆಗಳನ್ನು ಹಾಡಲಿದ್ದಾರೆ.

ಈ ಸುದ್ದಿಯನ್ನೂ ಓದಿ: ದೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬೇಡಿಕೆ, ವಿದೇಶಕ್ಕೆ ತೆರಳುವ ಅಗತ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ