Friday, 22nd November 2024

PM Modi Birthday: ಮೋದಿ ಜನುಮ ದಿನ ವಿವಿಧ ಮಳಿಗೆಗಳಲ್ಲಿ ವಿಶೇಷ ರಿಯಾಯಿತಿ, ಆಟೋದಲ್ಲಿ ಉಚಿತ ಪ್ರಯಾಣ!

PM Modi Birthday

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ (PM Modi Birthday) ಪ್ರಯುಕ್ತ ಗುಜರಾತ್‌ನ ಸೂರತ್‌ನಲ್ಲಿ (Surat) ಸ್ಥಳೀಯ ವ್ಯಾಪಾರಿಗಳು (Local merchants) ಹಲವು ವಿಶೇಷ ರಿಯಾಯಿತಿಗಳನ್ನು ಘೋಷಿಸಿದ್ದಾರೆ. ಹಲವಾರು ಸ್ಥಳೀಯ ವ್ಯಾಪಾರಿಗಳು ಶೇಕಡಾ 10ರಿಂದ 100ರಷ್ಟು ರಿಯಾಯಿತಿಗಳನ್ನು (discounts offer) ನೀಡುತ್ತಾರೆ ಎಂದು ಬಿಜೆಪಿ ನಾಯಕ ಪೂರ್ಣೇಶ್ ಮೋದಿ (BJP leader Purnesh Modi ) ತಿಳಿಸಿದ್ದಾರೆ.

ನನ್ನ ಕ್ಷೇತ್ರದಲ್ಲಿ ಪ್ರತಿ ವರ್ಷ ಪ್ರಧಾನಿ ಮೋದಿಯವರ ಜನ್ಮದಿನದಂದು ಕೆಲವು ಸೇವೆಗಳನ್ನು ನೀಡಲಾಗುತ್ತದೆ. ಈ ವರ್ಷ ವಿವಿಧ ಕ್ಷೇತ್ರಗಳ ಸುಮಾರು 2,500 ಉದ್ಯಮಿಗಳು ಶೇ. 10ರಿಂದ 100 ರಷ್ಟು ರಿಯಾಯಿತಿಗಳನ್ನುಒದಗಿಸಲಿದ್ದಾರೆ. 110 ಆಟೋ ರಿಕ್ಷಾಗಳು ಈ ದಿನದಂದು ಉಚಿತ ಪ್ರಯಾಣ ಸೇವೆಯನ್ನು ಒದಗಿಸಲಿದೆ ಎಂದರು.

PM Modi Birthday

ಪ್ರತಿ ವರ್ಷವೂ ಈ ಸೇವೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇವೆ. ಆದರೆ ಯಾರಿಗೂ ಒತ್ತಾಯ ಮಾಡುವುದಿಲ್ಲ. ಪ್ರತಿ ಅಂಗಡಿಗಳೂ ರಿಯಾಯಿತಿಗಳ ಬಗ್ಗೆ ತಮ್ಮದೇ ಆದ ಯೋಜನೆಯನ್ನು ಹೊಂದಿರುತ್ತದೆ ಮತ್ತು ಇದು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ ಎಂದು ಪೂರ್ಣೇಶ್ ಮೋದಿ ತಿಳಿಸಿದರು.

ಯಾರೆಲ್ಲ ಭಾಗಿ?

ಹೊಟೇಲ್, ರೆಸ್ಟೋರೆಂಟ್‌, ಕ್ಲಿನಿಕ್‌, ತರಕಾರಿ ಮಾರುಕಟ್ಟೆ ಮತ್ತು ಬೇಕರಿಗಳು ಸೇರಿದಂತೆ ವಿವಿಧ ವಲಯಗಳ ವ್ಯಾಪಾರಿಗಳು ಇದರಲ್ಲಿ ಭಾಗವಹಿಸುತ್ತಾರೆ. ಸೂರತ್‌ನ ಆಟೋ ಯೂನಿಯನ್ ಕೂಡ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗುತ್ತಿದೆ. ಈ ದಿನವನ್ನು ನಾವು ಸೇವಾ ದಿನ ಎಂದು ಆಚರಿಸುತ್ತೇವೆ ಎಂದು ಯೂನಿಯನ್ ಅಧ್ಯಕ್ಷ ರಾಜು ಭಂಡಾರಿ ಹೇಳಿದ್ದಾರೆ.

ಮೋದಿಯವರ ಜನ್ಮ ದಿನದ ಪ್ರಯುಕ್ತ ಆಟೋ ಚಾಲಕರು ಉಚಿತ ಪ್ರಯಾಣ ಸೇವೆಯನ್ನು ಒದಗಿಸುತ್ತಾರೆ. ಎಲ್ಲರೂ ಒಟ್ಟಾಗಿ ಇದನ್ನು ಮಾಡುವ ಉದ್ದೇಶದಿಂದ ಸೆಪ್ಟೆಂಬರ್ 16ರಂದು ಅಂದರೆ ನರೇಂದ್ರ ಮೋದಿ ಅವರ ಜನ್ಮದಿನದ ಒಂದು ದಿನ ಮೊದಲು ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೇವೆ ಒದಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಗ್ರಾಹಕರಲ್ಲಿ ಉತ್ಸಾಹ

ಸೆಪ್ಟೆಂಬರ್ ತಿಂಗಳೆಂದರೆ ಹಬ್ಬದ ಋತು. ಈ ಸಂದರ್ಭದಲ್ಲಿ ಹೆಚ್ಚಿನ ಜನರು ಖರೀದಿಯ ಉತ್ಸಾಹದಲ್ಲಿರುತ್ತಾರೆ. ಹೀಗಾಗಿ ವ್ಯಾಪಾರಿಗಳು ಉತ್ತಮ ರಿಯಾಯಿತಿಗಳನ್ನು ಘೋಷಿಸುತ್ತಾರೆ. ರಿಯಾಯಿತಿಗಳನ್ನು ಘೋಷಿಸಲು ಸೂರತ್‌ನ ವ್ಯಾಪಾರಿಗಳೂ ಉತ್ಸಾಹ ತೋರುತ್ತಾರೆ.

PM Modi Birthday

ಒಡಿಶಾದಲ್ಲಿ ಆಚರಣೆ

ಜನ್ಮ ದಿನದಂದು ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಒಡಿಶಾಗೆ ಭೇಟಿ ನೀಡಲಿದ್ದು, ‘ಸುಭದ್ರಾ ಯೋಜನೆ’ ಗೆ ಚಾಲನೆ ನೀಡಲಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿ ಒಡಿಶಾದಲ್ಲಿ ‘ಮೋದಿ ಗ್ಯಾರಂಟಿ’ ನೀಡುವ ಭರವಸೆ ನೀಡಿದ್ದರು. ಇಲ್ಲಿ ಸರ್ಕಾರ ಪ್ರತಿ ಮಹಿಳೆಗೆ ಐದು ವರ್ಷಗಳಲ್ಲಿ 50,000 ರೂ. ನೀಡಲಿದೆ. ಸೆಪ್ಟೆಂಬರ್ 17ರಂದು ಈ ಪ್ರಕ್ರಿಯೆ ಆರಂಭವಾಗಲಿದ್ದು, ಸುಮಾರು 1.30 ಕೋಟಿ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಸುಭದ್ರಾ ಯೋಜನೆ ಮೂಲಕ ಮೊದಲ ಕಂತಿನ 5,000 ರೂ. ಅನ್ನು ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.

PM to visit Odisha : : ಮೋದಿ ಕಾರ್ಯಕ್ರಮದ ನಿರ್ವಹಣೆಗೆ ಮೃತ ಅಧಿಕಾರಿಯನ್ನು ನಿಯೋಜಿಸಿದ ಒಡಿಶಾ ಸರ್ಕಾರ

ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಭುವನೇಶ್ವರದ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮನೆಯ ಕೀಗಳನ್ನು ಹಸ್ತಾಂತರಿಸಲಿದ್ದಾರೆ. ಆವಾಸ್ + 2024 ಅಪ್ಲಿಕೇಶನ್ ಗೆ ಚಾಲನೆ ನೀಡಲಿದ್ದಾರೆ.