Thursday, 12th December 2024

ಹಿರಿಯ ನಟ ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಮುಂಬೈ: ಬಾಲಿವುಟ್ ಹಿರಿಯ ನಟ ದಿಲೀಪ್ ಕುಮಾರ್ ಅವರು, ನಿಧನ ಹೊಂದಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ದಿಲೀಪ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದೇನೆ. ದಿಲೀಪ್ ಅವರನ್ನು ಸಿನಿಮೀಯ ದಂತಕಥೆ ಎಂದು ಸ್ಮರಿಸಲಾಗುತ್ತದೆ. ದಿಲೀಪ್ ಅವರು ಸಾಟಿಯಿಲ್ಲದ ಪ್ರತಿಭೆಯನ್ನು ಹೊಂದಿದ್ದರು. ಈ ಕಾರಣದಿಂದ ಸಾಕಷ್ಟು ಪ್ರೇಕ್ಷಕರ ಮನಗೆದ್ದಿದ್ದರು. ಅವರ ನಿಧನ ಸಾಂಸ್ಕೃತಿಕ ಜಗತ್ತಿಗೆ ಆಗಿರುವ ದೊಡ್ಡ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ದಿಲೀಪ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ದಿಲೀಪ್​ ಕುಮಾರ್​ ಅವರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡು, ಭಾರತದ ಸಿನಿಮಾ ಜಗತ್ತಿಗೆ ದಿಲೀಪ್​ ಕುಮಾರ್​ ಜೀ ನೀಡಿರುವ ಕೊಡುಗೆ ಸದಾ ಸ್ಮರಣೀಯ. ಅವರ ಕುಟುಂಬ, ಸ್ನೇಹಿತ ವರ್ಗಕ್ಕೆ ನನ್ನ ಹೃದಯಪೂರ್ವಕ ಸಾಂತ್ವನಗಳು ಎಂದು ಹೇಳಿದ್ದಾರೆ.