Saturday, 14th December 2024

ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಚಾಲನೆ

ನವದೆಹಲಿ: ಕೋವಿಡ್‌-19 ಪಿಡುಗಿನ ವಿರುದ್ಧ ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.

ಅದರೊಂದಿಗೆ ದೇಶದ ಒಟ್ಟು 3,006 ಕೇಂದ್ರಗಳಲ್ಲು ಲಸಿಕೆ ಹಾಕುವಿಕೆ ಆರಂಭವಾಗಲಿದೆ. ಈ ಎಲ್ಲ ಕೇಂದ್ರಗಳ ನಡುವೆ ಆನ್ ‌ಲೈನ್‌ ಮೂಲಕ ಸಂಪರ್ಕ ಏರ್ಪಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿಯೂ ನೂರು ಫಲಾನುಭವಿಗಳಿಗೆ ಮೊದಲ ದಿನ ಲಸಿಕೆ ಹಾಕ ಲಾಗುತ್ತಿದೆ. ರಾಜ್ಯ ಮತ್ತು ದೇಶದಲ್ಲಿ ನಡೆಯುತ್ತಿರುವ ಈ ಲಸಿಕಾ ಅಭಿಯಾನದ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ನೀಡಲಾ ಗುತ್ತಿದೆ.