ನವದೆಹಲಿ: ಮಹತ್ವದ ಕೃಷಿ ಕಾಯಿದೆಯಿಂದ ರೈತರಿಗೆ ಬಲ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಪಿಎಂಸಿ, ಕೃಷಿ ಬಿಲ್ ಬಗ್ಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಮರ್ಥನೆ ಮಾಡಿದ್ದಾರೆ.
ದೇಶದಲ್ಲಿ ಎಲ್ಲಿ ಬೇಕಾದರೂ ಉತ್ತಮ ಬೆಲೆಗೆ ಬೆಳೆ ಮಾರಲು ಅವಕಾಶವಿದೆ. ಕೃಷಿ ಬಿಲ್ ನಿಂದ ರೈತರಿಗೆ ಉಪಯುಕ್ತವಾಗಿದೆ. ಹೊಸ ಬಿಲ್ ನಿಂದ ರೈತರಿಗೆ ತೊಂದರೆ ಇಲ್ಲ. ಕೃಷಿ ಬಿಲ್ ಬಗ್ಗೆ ವಿಪಕ್ಷ ಅಪಪ್ರಚಾರ ಮಾಡುತ್ತಿವೆ ಎಂದು ಟೀಕಿಸಿದರು.
ಯಾವುದೇ ಕಾರಣಕ್ಕೂ ಎಪಿಎಂಸಿಗಳನ್ನು ಮುಚ್ಚಲ್ಲ. ಇದು ಬದಲಾವಣೆಯ ಸಮಯ ಎಂಬುದನ್ನು ಪ್ರತಿಪಾದಿಸಿದ ಮೋದಿ, ರೈತರಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಮಾಡಿದ್ದೇವೆ. ೨೧ನೇ ಶತಮಾನ ಕ್ಕೆ ಈ ಕಾಯಿದೆ ಅತ್ಯಗತ್ಯ. ರೈತರು ತಮ್ಮ ಬೆಳೆಯನ್ನು ಮುಕ್ತವಾಗಿ ಮಾರಬಹುದು ಎಂದು ಆಶಾಕಿರಣ ಮೂಡಿಸಿದರು.