Friday, 22nd November 2024

ನೂತನ ಸಂಸತ್‌ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ನವಭಾರತಕ್ಕೆ ನೂತನ ಸಂಸತ್‍ ಭವನ

ಶೃಂಗೇರಿಯ ಪುರೋಹಿತರಿಂದ ಪೂಜಾ ಕೈಂಕರ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ನೂತನ ಸಂಸತ್‌ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇಂದಿನಿಂದ ಸಂಸತ್‍ ಭವನದ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಇದಕ್ಕೂ ಮುನ್ನ, ಕರ್ನಾಟಕದ ಶೃಂಗೇರಿ ಮಠದ ಆರು ಮಂದಿ ಪುರೋಹಿತರಿಂದ ಪೂಜಾ ಕಾರ‍್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು.

ರೂಪಾಯಿ 971 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಹೊಸ ಸಂಸತ್‍ ಭವನವು 2022ರ ವೇಳೆಗೆ ಸಿದ್ದವಾಗಲಿದೆ ಎನ್ನಲಾಗುತ್ತಿದೆ. ಎಂದರೆ, ಭಾರತದ 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಸಂಸತ್‍ ಭವನ ಸಿದ್ದವಾಗುವ ಸಾಧ್ಯತೆಯಿದೆ.

ಶಂಕುಸ್ಥಾಪನೆ ವೇಳೆ ಸರ್ವಧರ್ಮ ಗುರುಗಳಿಂದ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು. 64500 ಚದರ ಮೀಟರ್‌ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಸಂಸತ್‌ ಭವನದಲ್ಲಿ 1224 ಸಂಸದರು ಕುಳಿತುಕೊಳ್ಳಬಹುದು. ಗುಜರಾತಿನ ಎಚ್‍ಸಿಪಿ ಡಿಸೈನ್ಸ್ ಸಂಸ್ಥೆ ಕಟ್ಟಡದ ವಿನ್ಯಾಸದ ಹೊಣೆ ವಹಿಸಲಾಗಿದೆ. ಹೊಸ ಸಂಸತ್‍ ಭವನದಲ್ಲಿ ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ ವ್ಯವಸ್ಥೆ ಇದೆ. ಸೌತ್ ಬ್ಲಾಕ್‍‍ನಲ್ಲಿ ಪ್ರಧಾನಿ ನಿವಾಸ ನಿರ್ಮಾಣ ಮಾಡಲಾಗುವುದು. ಕಾಗದರಹಿತ ಸಂವಹನಾ ವ್ಯವಸ್ಥೆಗೆ ಹೊಸ ಕಟ್ಟಡದಲ್ಲಿ ಆದ್ಯತೆ ನೀಡಲಾಗಿದೆ.

ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿಯವರಿಗೆ ಪೂಜಾ ಕಾರ‍್ಯಕ್ರಮದ ಜವಾಬ್ದಾರಿ ವಹಿಸಲಾಗಿತ್ತು.