ಕಳೆದ ವರ್ಷ ನವೀಕರಣಗೊಂಡ ಜಲಿಯನ್ ವಾಲಾ ಬಾಗ್ ಸ್ಮಾರಕದ ಉದ್ಘಾಟನೆ ವೇಳೆ ಮಾಡಿದ ಭಾಷಣದ ಯೂಟ್ಯೂಬ್ ಲಿಂಕ್ ಅನ್ನು ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
1919ರ ಏಪ್ರಿಲ್ 13ರಂದು ಪಂಜಾಬ್ ನ ಅಮೃತ್ ಸರದಲ್ಲಿರುವ ಜಲಿಯನ್ ವಾಲಾ ಬಾಗ್ ನಲ್ಲಿ ಅಂದಿನ ಬ್ರಿಟಿಷರ ರೌಲಟ್ ಕಾಯ್ದೆಯನ್ನು ವಿರೋಧಿಸಿ ಸಾವಿರಾರು ಮಂದಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬ್ರಿಟಿಷ್ ಪಡೆಗಳು ಏಕಾಏಕಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಮಾರಣಹೋಮ ನಡೆಸಿತ್ತು.