Thursday, 12th December 2024

ಪಿ.ವಿ.ನರಸಿಂಹರಾವ್ ಜನ್ಮ ವರ್ಷಾಚರಣೆ: ಪ್ರಧಾನಿ ಗೌರವ ನಮನ

ನವದೆಹಲಿ: ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಜೀ ಅವರಿಗೆ 100ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಗೌರವ ನಮನಗಳು. ರಾಷ್ಟ್ರಾಭಿವೃದ್ಧಿಗೆ ಅವರ ಅಪಾರ ಕೊಡುಗೆಯನ್ನು ಭಾರತ ಸ್ಮರಿಸುತ್ತದೆ ಎಂದು ಪ್ರಧಾನಿ ಟ್ವೀಟ್‍ ಮಾಡಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಾನು ಅವರ ಬಗ್ಗೆ ಮಾತನಾಡಿದ್ದನ್ನು ಹಂಚಿಕೊಳ್ಳುತ್ತಿದ್ದೇನೆ” ಎಂಬ ಶೀರ್ಷಿಕೆಯೊಂದಿಗೆ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪಾಮುಲಪರ್ತಿ ವೆಂಕಟ ನರಸಿಂಹರಾವ್ ಅವರು ಭಾರತೀಯ ವಕೀಲ ಮತ್ತು ರಾಜಕಾರಣಿಯಾಗಿದ್ದು, 1991 ರಿಂದ 1996 ರವರೆಗೆ ಭಾರತದ 10 ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.