ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅ.29ರಿಂದ ನ.2ರ ವರೆಗೆ ಇಟಲಿ ಮತ್ತು ಯನೈಟೆಡ್ ಕಿಂಗ್‌ಡಮ್ ಪ್ರವಾಸ ಕೈಗೊಳ್ಳಲಿದ್ದಾರೆ.
ಇಟಲಿಯಲ್ಲಿ ಅ.30 ಮತ್ತು ಅ.31ರಂದು ನಡೆಯಲಿರುವ 16ನೇ ಜಿ.20 ರಾಷ್ಟ್ರಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಜಗತ್ತಿನ ರಾಷ್ಟ್ರಗಳ ಗಮನ ಸೆಳೆಯಲಿದ್ದಾರೆ. 2023ರಲ್ಲಿ ಭಾರತ ಜಿ-20 ರಾಷ್ಟ್ರಗಳ ಸಮ್ಮೇಳನ ಆಯೋಜಿಸಲಿದೆ ಎಂದೂ ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಬಳಿಕ ಯು.ಕೆ.ಯ ಗ್ಲಾಸ್ಕೋಗೆ ತೆರಳಲಿದ್ದಾರೆ. ಅಲ್ಲಿ ಅವರು ಜಗತ್ತಿನ ಪ್ರಮುಖ ರಾಷ್ಟ್ರಗಳ ನಾಯಕರು ಭಾಗವಹಿಸುವ 26ನೇ ಕಾನ್ಫರೆನ್ಸ್ ಆಫ್ ಪಾರ್ಟಿಸ್ (ಸಿಒಪಿ-26)ನಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಪ್ರಧಾನಿ ಬೆಳಕು ಚೆಲ್ಲಲಿದ್ದಾರೆ.