Thursday, 12th December 2024

ನವೆಂಬರ್‌ 5ರಂದು ಕೇದಾರನಾಥಕ್ಕೆ ಮೋದಿ ಭೇಟಿ

ಡೆಹ್ರಾಡೂನ್:‌ ನವೆಂಬರ್‌ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೇದಾರನಾಥಕ್ಕೆ ತೆರಳಲಿದ್ದು, ಕೇದಾರಪುರಿ ಪುನರ್ ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ರಿಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅ.7 ರಂದು ಭೇಟಿ ನೀಡಿ ಆಮ್ಲಜನಕ ಘಟಕದ ಉದ್ಘಾಟಿಸಿದ್ದರು. ಹೀಗಾಗಿ ಮೋದಿ ಅವರು ತಿಂಗಳ ಅವಧಿಯಲ್ಲಿ ಎರಡು ಬಾರಿ ಉತ್ತರಾಖಂಡ್‌ಗೆ ಆಗಮಿಸಲಿದ್ದಾರೆ.

ವಿಚಾರವನ್ನು ಖಚಿತಪಡಿಸಿರುವ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಪ್ರಧಾನಿಯವರು ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅದೇ ರೀತಿ, ಆದಿ ಗುರು ಶಂಕರಾಚಾರ್ಯರ ಸಮಾಧಿ ಮರು ನಿರ್ಮಾಣ ಸೇರಿದಂತೆ ₹ 250 ಕೋಟಿ ವೆಚ್ಚದ ಕೇದಾರಪುರಿ ಪುನರ್‌ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.