ನವದೆಹಲಿ: ದೇಶದ ಹಲವೆಡೆ ಮಕರ ಸಂಕ್ರಾಂತಿ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
ಈ ಶುಭ ಉತ್ಸವವು ಭಾರತದ ವೈವಿಧ್ಯತೆ ಮತ್ತು ನಮ್ಮ ಸಂಪ್ರದಾಯಗಳ ಚೈತನ್ಯವನ್ನು ವಿವರಿಸುತ್ತದೆ. ಸಂಕ್ರಾಂತಿಯ ಪ್ರಕೃತಿ ತಾಯಿಯನ್ನು ಗೌರವಿಸುವ ಮಹತ್ವವನ್ನು ಪುನರುಚ್ಚರಿಸುತ್ತದೆ ಎಂದು ಟ್ವೀಟ್ ಮೂಲಕ ಪ್ರಧಾನಿ ಶುಭ ಕೋರಿದ್ದಾರೆ.
ತಮಿಳಿಗರಿಗೆ ಸಂಕ್ರಾಂತಿ ವಿಶೇಷವಾಗಿದ್ದು, ಪೊಂಗಲ್ ಎಂದೇ ಸ್ಥಳೀಯವಾಗಿ ಖ್ಯಾತಿಯಾಗಿದೆ. ತಮಿಳು ಸಹೋದರಿಯರು ಮತ್ತು ಸಹೋದರರಿಗೆ ಪೊಂಗಲ್ ಶುಭಾಶಯಗಳು ಎಂದು ಪ್ರಧಾನಿ ಶುಭ ಕೋರಿದ್ದಾರೆ.