Thursday, 25th July 2024

ಮಕರ ಸಂಕ್ರಾಂತಿ: ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ದೇಶದ ಹಲವೆಡೆ ಮಕರ ಸಂಕ್ರಾಂತಿ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.

ಈ ಶುಭ ಉತ್ಸವವು ಭಾರತದ ವೈವಿಧ್ಯತೆ ಮತ್ತು ನಮ್ಮ ಸಂಪ್ರದಾಯಗಳ ಚೈತನ್ಯವನ್ನು ವಿವರಿಸುತ್ತದೆ. ಸಂಕ್ರಾಂತಿಯ ಪ್ರಕೃತಿ ತಾಯಿಯನ್ನು ಗೌರವಿಸುವ ಮಹತ್ವವನ್ನು ಪುನರುಚ್ಚರಿಸುತ್ತದೆ ಎಂದು ಟ್ವೀಟ್​ ಮೂಲಕ ಪ್ರಧಾನಿ ಶುಭ ಕೋರಿದ್ದಾರೆ.

ತಮಿಳಿಗರಿಗೆ ಸಂಕ್ರಾಂತಿ ವಿಶೇಷವಾಗಿದ್ದು, ಪೊಂಗಲ್​ ಎಂದೇ ಸ್ಥಳೀಯವಾಗಿ ಖ್ಯಾತಿಯಾಗಿದೆ. ತಮಿಳು ಸಹೋದರಿಯರು ಮತ್ತು ಸಹೋದರರಿಗೆ ಪೊಂಗಲ್ ಶುಭಾಶಯಗಳು ಎಂದು ಪ್ರಧಾನಿ ಶುಭ ಕೋರಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!