Wednesday, 11th December 2024

ದೇಶದ ಅಭಿವೃದ್ಧಿಗೆ ಕಲಾಂ ನೀಡಿದ ಕೊಡುಗೆ ಮರೆಯಲಾರದು: ಮೋದಿ

ನವದೆಹಲಿ : ಮಾಜಿ ರಾಷ್ಟ್ರಪತಿ, ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ 89 ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಅಬ್ದುಲ್ ಕಲಾಂ ಅವರು ಒಬ್ಬ ವಿಜ್ಞಾನಿಯಾಗಿ, ಭಾರತದ ರಾಷ್ಟ್ರಪತಿಯಾಗಿ ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಭಾರತ ಎಂದಿಗೂ ಮರೆಯಲಾರದು. ಅವರ ಜೀವನ ಪಯಣ ಲಕ್ಷಾಂತರ ಜನಕ್ಕೆ ಶಕ್ತಿ ತುಂಬುತ್ತದೆ ಎಂದು ಶುಭ ಕೋರಿದ್ದಾರೆ.

ಭಾರತದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ರೂವಾರಿ, ಸದಾ ಸದೃಢ ಮತ್ತು ಸ್ವಾವಲಂಬಿ ಭಾರತವನ್ನು ಕಟ್ಟ ಬೇಕೆಂಬ ಹಂಬಲಹೊಂದಿದ್ದ ದೂರದೃಷ್ಟಿಯುಳ್ಳ ನಾಯಕ ಮತ್ತು ವಾಸ್ತುಶಿಲ್ಪಿ. ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಅಮರ ಪರಂಪರೆ ಸ್ಫೂರ್ತಿಯ ಒಂದು ರೂಪವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.