Thursday, 19th September 2024

Vande Bharat Express: 3 ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೋದಿ ಇಂದು ಚಾಲನೆ; ಕರ್ನಾಟಕಕ್ಕೂ ಇದೆ ರೈಲು

Vande Bharat Express

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು (ಆಗಸ್ಟ್‌ 31) 3 ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಕರ್ನಾಟಕ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಓಡಾಡಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಈಗಾಗಲೇ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆದ್ದು, ದೇಶದ 280ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿವೆ. ಈ ಸಾಲಿಗೆ ಮತ್ತೂ 3 ರೈಲುಗಳು ಸೇರ್ಪಡೆಯಾಗಲಿವೆ.

https://x.com/RailMinIndia/status/1829750827512373356

ಯಾವ ಮಾರ್ಗಗಳಲ್ಲಿ ಸಂಚಾರ?

ಮಧುರೈಯಿಂದ ಬೆಂಗಳೂರು ಕಂಟೋನ್ಮೆಂಟ್, ಚೆನ್ನೈ ಸೆಂಟ್ರಲ್‌ನಿಂದ ನಾಗರಕೋಯಿಲ್‌ ಮತ್ತು ಮೀರತ್ ನಗರದಿಂದ ಲಕ್ನೋವರೆಗೆ ಈ 3 ರೈಲುಗಳು ಓಡಾಟ ನಡೆಸಲಿವೆ.  ಈ 3 ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.

ಮಧುರೈ-ಬೆಂಗಳೂರು ರೈಲಿನ ವಿವರ

  • ಮಧುರೈ-ಬೆಂಗಳೂರು ಕಂಟೋನ್ಮೆಂಟ್ ರೈಲು ಮಂಗಳವಾರ ಹೊರತುಪಡಿಸಿ ವಾರದ 6 ದಿನಗಳೂ ಓಡಾಡಲಿದೆ.
  • ಈ ರೈಲು ತಮಿಳುನಾಡಿನ ಟೆಂಪಲ್‌ ಸಿಟಿ ಮಧುರೈ ಮತ್ತು ಕರ್ನಾಟಕದ ರಾಜಧಾನಿ, ಐಟಿ ಸಿಟಿ ಬೆಂಗಳೂರನ್ನು ಸಂಪರ್ಕಿಸಲಿದೆ.
  • 20671 ನಂಬರ್‌ನ ಈ ರೈಲು ಮಧುರೈನಿಂದ ಬೆಳಿಗ್ಗೆ 5:15ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ದಿಂಡುಗಲ್, ತಿರುಚಿರಾಪಳ್ಳಿ, ಕರೂರ್, ನಾಮಕ್ಕಲ್, ಸೇಲಂನಲ್ಲಿ ಸ್ಟಾಪ್‌ ಇದೆ. ಬೆಂಗಳೂರಿನಿಂದ ಮಧ್ಯಾಹ್ನ 1:30ಕ್ಕೆ ಹೊರಟ ರೈಲು ರಾತ್ರಿ 9:45ಕ್ಕೆ ಮಧುರೈ ತಲುಪಲಿದೆ.

ಚೆನ್ನೈ ಸೆಂಟ್ರಲ್‌-ನಾಗರಕೋಯಿಲ್‌ ರೈಲಿನ ವಿವರ

  • ಚೆನ್ನೈ ಸೆಂಟ್ರಲ್‌-ನಾಗರಕೋಯಿಲ್‌ ನಡುವಿನ ಈ ರೈಲು ಬುಧವಾರ ಹೊರತುಪಡಿಸಿ ವಾರದ 6 ದಿನಗಳೂ ಓಡಾಡಲಿದೆ.
  • ಈ ರೈಲಿನಿಂದ ಅರುಳ್‌ಮಿಗು ಮೀನಾಕ್ಷಿ ಅಮ್ಮಾನ್‌ ದೇವಸ್ಥಾನ, ಮಧುರೈ ಮತ್ತು ಕುಮಾರಿ ಅಮ್ಮಾನ್‌ ದೇವಸ್ಥಾನ ಮತ್ತು ಕನ್ಯಾಕುಮಾರಿ ಪ್ರವಾಸಿಗರಿಗೆ ಅನುಕೂಲವಾಗಲಿದೆ.
  • 20627 ನಂಬರ್‌ನ ಈ ರೈಲು ಚೆನ್ನೈ ಎಗ್ಮೋರ್‌ನಿಂದ ಬೆಳಿಗ್ಗೆ 5 ಗಂಟೆಗೆ ಹೊರಟು ನಾಗರ್‌ಕೋಯಿಲ್‌ಗೆ ಮಧ್ಯಾಹ್ನ 1:50ಕ್ಕೆ ತಲುಪಲಿದೆ. ತಾಂಬರಂ, ವಿಲ್ಲುಪುರಂ, ತಿರುಚಿರಪಳ್ಳಿ, ದಿಂಡುಗಲ್‌, ಮಧುರೈ, ಕೋವಿಲ್‌ಪಟ್ಟಿ ಮತ್ತು ತಿರುನಲ್‌ವೇಲಿಯಲ್ಲಿ ನಿಲುಗಡೆಯಾಗಲಿದೆ. ನಾಗರ್‌ಕೋಯಿಲ್‌ನಿಂದ ಅಪರಾಹ್ನ 2.20ಕ್ಕೆ ಹೊರಟು ರಾತ್ರಿ 11 ಗಂಟೆಗೆ ತಲುಪಲಿದೆ.

ಮೀರತ್ ಸಿಟಿ-ಲಕ್ನೋ ರೈಲಿನ ವಿವರ

  • ಮೀರತ್ ಸಿಟಿ-ಲಕ್ನೋ ವಂದೇ ಭಾರತ್ ರೈಲು ಭಾನುವಾರ ಲಕ್ನೋದಿಂದ ಮತ್ತು ಸೋಮವಾರ ಮೀರತ್‌ನಿಂದ ಹೊರಡಲಿದೆ.  ಇದು ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನ ಕಾರ್ಯನಿರ್ವಹಿಸಲಿದೆ.
  • ಧಾರ್ಮಿಕ ಪ್ರವಾಸೋದ್ಯಮಕ್ಕೆ ಈ ರೈಲು ಸೇವೆ ಬಹಳಷ್ಟು ಕೊಡುಗೆ ನೀಡಲಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ದಿಗಂಬರ ಜೈನ್‌ ದೇವಸ್ಥಾನ, ಮಾನಸ ದೇವಿ ಮಂದಿರ, ಸೂರಜ್‌ಕುಂಡ ದೇವಸ್ಥಾನ ಮತ್ತು ಔರಂಗನಾಥ ದೇವಸ್ಥಾನಗಳಿಗೆ ಸಂಪರ್ಕ ಸಾಧಿಸಲಿದೆ.
  • 20627 ನಂಬರ್‌ನ ಈ ರೈಲು ಮೀರತ್‌ ಸಿಟಿಯಿಂದ ಬೆಳಿಗ್ಗೆ 6:35ಕ್ಕೆ ಹೊರಡಲಿದೆ ಮತ್ತು ಲಕ್ನೋ ಚಾರ್‌ಭಾಗ್‌ ರೈಲು ನಿಲ್ದಾಣಕ್ಕೆ 1:45ಕ್ಕೆ ತಲುಪಲಿದೆ. ಮೊರಾದಾಬಾದ್‌ ಮತ್ತು ಬರೇಲಿಯಲ್ಲಿ ನಿಲುಗಡೆಯಾಗಲಿದೆ. ಚಾರ್‌ಭಾಗ್‌ನಿಂದ ಅಪರಾಹ್ನ 2:45ಕ್ಕೆ ಹೊರಡುವ ರೈಲು ರಾತ್ರಿ 10 ಗಂಟೆಗೆ ಮೀರತ್‌ ನಗರಕ್ಕೆ ತಲುಪಲಿದೆ.

Leave a Reply

Your email address will not be published. Required fields are marked *