Thursday, 12th December 2024

ವಾಜಪೇಯಿ, ಮದನ್​ ಮೋಹನ ಮಾಳವೀಯ ಜನ್ಮ ದಿನ: ಪ್ರಧಾನಿ ಗೌರವ ನಮನ

ಹೈದರಾಬಾದ್ : ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.

ದೇಶವನ್ನು ಉನ್ನತ ಅಭಿವೃದ್ಧಿಯತ್ತ ಕೊಂಡೊಯ್ದವರು ವಾಜಪೇಯಿಯವರು. ಸಮೃದ್ಧ ಭಾರತ ನಿರ್ಮಾಣ ಮಾಡುವ ಅವರ ಪ್ರಯತ್ನಗಳನ್ನು ದೇಶ ಸದಾ ನೆನಪಿಟ್ಟುಕೊಳ್ಳುತ್ತದೆ’ ಎಂದು ಪ್ರಧಾನಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಭಾರತೀಯ ವಿದ್ವಾಂಸ ಪಂಡಿತ್​ ಮದನ್​ ಮೋಹನ ಮಾಳವೀಯ ಅವರ ಜನ್ಮದಿನವೂ ಇಂದೇ ಆಗಿದ್ದು, ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಸ್ಮರಿಸಿದ್ದಾರೆ.