Wednesday, 11th December 2024

ಜಯಲಲಿತಾ ಸ್ಮಾರಕ ಅನಾವರಣಕ್ಕೆ ಪ್ರಧಾನಿಗೆ ಆಹ್ವಾನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪಾಡ್ಡಿ ಕೆ ಪಳನಿಸ್ವಾಮಿ ಇದೇ ತಿಂಗಳ 18ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಜಯಲಲಿತಾ ಸ್ಮಾರಕ ಅನಾವರಣಕ್ಕೆ ಆಹ್ವಾನಿಸಲಿದ್ದಾರೆ.

ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು, ಎನ್ ಡಿಎ ಮೈತ್ರಿಪಕ್ಷವಾಗಿರುವ ಎಐಎಡಿಎಂಕೆ, ಬಿಜೆಪಿ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಮೈತ್ರಿ ಹಾಗೂ ಸೀಟು ಹೊಂದಾಣಿಕೆ ಸಂಬಂಧ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ.