Friday, 22nd November 2024

ರೂ. 17500 ಕೋಟಿ ಮೌಲ್ಯದ 23 ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನಾಳೆ

ಡೆಹ್ರಾಡೂನ್: ಉತ್ತರಾಖಂಡಕ್ಕೆ ಡಿ.30 ರಂದು ಭೇಟಿ ನೀಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ರೂ. 17500 ಕೋಟಿಗೂ ಹೆಚ್ಚು ಮೌಲ್ಯದ 23 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉತ್ತರಾಖಂಡದ ಹಲ್ಡವಾನಿಗೆ ಭೇಟಿ ನೀಡಲಿದ್ದಾರೆ.

23 ಯೋಜನೆಗಳ ಪೈಕಿ 14100 ಕೋಟಿ ರೂ.ಗೂ ಅಧಿಕ ಮೊತ್ತದ 17 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. ಈ ಯೋಜನೆ ಗಳು ನೀರಾವರಿ, ರಸ್ತೆ, ವಸತಿ, ಆರೋಗ್ಯ ಮೂಲಸೌಕರ್ಯ, ಕೈಗಾರಿಕೆ, ನೈರ್ಮಲ್ಯ, ಕುಡಿಯುವ ನೀರು ಸರಬರಾಜು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕ ಶ್ರೇಣಿಯ ಕ್ಷೇತ್ರಗಳು/ಪ್ರದೇಶಗಳನ್ನು ಒಳಗೊಂಡಿವೆ.

ಬಹು ರಸ್ತೆ ವಿಸ್ತರಣೆ ಯೋಜನೆಗಳು, ಪಿಥೋರಗಢದಲ್ಲಿ ಜಲವಿದ್ಯುತ್ ಯೋಜನೆ ಮತ್ತು ನೈನಿತಾಲ್‌ ನಲ್ಲಿ ಒಳಚರಂಡಿ ಜಾಲವನ್ನು ಸುಧಾರಿಸುವ ಯೋಜನೆಗಳನ್ನೂ ಒಳ ಗೊಂಡಂತೆ 6 ಯೋಜನೆಗಳ ಉದ್ಘಾಟನೆಗೆ ಸಾಕ್ಷಿಯಾಗಲಿದೆ. ಉದ್ಘಾಟನೆಗೊಳ್ಳು ತ್ತಿರುವ ಯೋಜನೆಗಳ ಒಟ್ಟು ವೆಚ್ಚ 3400 ಕೋಟಿ ರೂ. ಆಗಿದೆ.

5750 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಲಖ್ವಾರ್ ವಿವಿಧೋದ್ದೇಶ ಯೋಜನೆಗೆ ಪ್ರಧಾನಮಂತ್ರಿಯವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನೆಯನ್ನು ಮೊದಲು 1976ರಲ್ಲಿ ರೂಪಿಸಲಾಗಿತ್ತು. ದೀರ್ಘಕಾಲದಿಂದ ಬಾಕಿ ಉಳಿದಿರುವ ಯೋಜನೆಗಳಿಗೆ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ದೃಷ್ಟಿಕೋನವು ಯೋಜನೆಯ ಶಂಕುಸ್ಥಾಪನೆಯ ಹಿಂದಿನ ಶಕ್ತಿಯಾಗಿದೆ.

ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ, ಸುಮಾರು 87೦೦ ಕೋಟಿ ರೂ.ಗಳ ಬಹು ರಸ್ತೆ ವಲಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಾಗುವುದು.

4000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ 85 ಕಿಲೋ ಮೀಟರ್ ಮೊರಾದಾಬಾದ್-ಕಾಶಿಪುರ ರಸ್ತೆಯ ಚತುಷ್ಪಥ; ಗದರ್ಪುರ್- ದಿನೇಶ್ ಪುರ್- ಮಡ್ಕೋಟಾ-ಹಲ್ದ್ ವಾನಿ ರಸ್ತೆಯ 22 ಕಿಲೋ ಮೀಟರ್ ಉದ್ದದ ದ್ವಿಪಥ (ಎಸ್.ಎಚ್-5) ಮತ್ತು ಕಿಚ್ಚದಿಂದ ಪಂತ್ ನಗರ್‌ಗೆ 18 ಕಿಲೋಮೀಟರ್ ಉದ್ದದ ಯೋಜನೆಗಳು ಶಂಕುಸ್ಥಾಪನೆ ನೆರವೇರಿಸಲಿವೆ. (ಎಸ್.ಎಚ್. 44); ಉಧಮ್ ಸಿಂಗ್ ನಗರದಲ್ಲಿ 8 ಕಿಲೋ ಮೀಟರ್ ಉದ್ದದ ಖತೀಮಾ ಬೈಪಾಸ್ ನಿರ್ಮಾಣ; 175 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 109 ಡಿ) ನಿರ್ಮಾಣ. ಈ ರಸ್ತೆ ಯೋಜನೆಗಳು ಗರ್ವಾಲ್, ಕುಮಾವೂನ್ ಮತ್ತು ತೆರಾಯ್ ಪ್ರದೇಶದ ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಉತ್ತರಾಖಂಡ ಮತ್ತು ನೇಪಾಳದ ನಡುವಿನ ಸಂಪರ್ಕವನ್ನೂ ಸುಧಾರಿಸುತ್ತವೆ. ಸುಧಾರಿತ ಸಂಪರ್ಕವು ರುದ್ರಪುರ ಮತ್ತು ಲಾಲ್ ಕುವಾನ್‌ನ ಕೈಗಾರಿಕಾ ಪ್ರದೇಶಗಳಿಗೆ ಪ್ರಯೋಜನಕಾರಿಯಾಗಲಿದೆ ಮತ್ತು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಪ್ರವೇಶವನ್ನು ಸುಧಾರಿಸುತ್ತದೆ.

ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ ಅನೇಕ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರಸ್ತೆ ಯೋಜನೆಗಳಲ್ಲಿ 2500 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸ ಲಾದ ನಾಗಿನಾದಿಂದ ಕಾಶಿಪುರ (ರಾಷ್ಟ್ರೀಯ ಹೆದ್ದಾರಿ74) ವರೆಗಿನ 99 ಕಿಲೋ ಮೀಟರ್ ರಸ್ತೆ ಅಗಲೀಕರಣ ಯೋಜನೆ ಮತ್ತು 780 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಸರ್ವಋತು ರಸ್ತೆ ಯೋಜನೆಯಡಿ ನಿರ್ಮಿಸಲಾದ ವ್ಯೂಹಾತ್ಮಕ ತನಕ್ಪುರ್-ಪಿಥೋರ್ಗರ್ ರಸ್ತೆ (ರಾ.ಹೆ. 125)ಯಲ್ಲಿ ಮೂರು ವಿಸ್ತಾರಗಳಲ್ಲಿ ರಸ್ತೆ ಅಗಲೀಕರಣ ಮಾಡುವ ಯೋಜನೆಗಳೂ ಸೇರಿವೆ.

ರಾಜ್ಯದ ವೈದ್ಯಕೀಯ ಮೂಲಸೌಕರ್ಯವನ್ನು ವಿಸ್ತರಿಸುವ ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ಜನರಿಗೆ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವಾಗಿ, ಪ್ರಧಾನಮಂತ್ರಿಯವರು ಉಧಮ್ ಸಿಂಗ್ ನಗರ ಜಿಲ್ಲೆಯ ಏಮ್ಸ್ ಋಷಿಕೇಶ್ ಉಪಗ್ರಹ ಕೇಂದ್ರ ಮತ್ತು ಪಿಥೋರಗಢದಲ್ಲಿ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್ ಗಂಜ್ ಮತ್ತು ಕಾಶಿಪುರ ನಗರಗಳಲ್ಲಿ ಆರ್ಥಿಕವಾಗಿ ದುರ್ಬಲವರ್ಗದವರಿಗೆ ಸುಮಾರು 24೦೦ ಮನೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಜಲ ಜೀವನ್ ಅಭಿಯಾನದ ಅಡಿಯಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ 73 ನೀರು ಸರಬರಾಜು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಿಗೆ ಒಟ್ಟು ಸುಮಾರು 1250 ಕೋಟಿ ರೂ. ವೆಚ್ಚವಾಗಲಿದೆ ಮತ್ತು ರಾಜ್ಯದ 1.3 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಪ್ರಧಾನಮಂತ್ರಿಯವರು ಈ ಎರಡು ನಗರಗಳಿಗೆ ನೀರು ಸರಬ ರಾಜು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಾಶಿಪುರದಲ್ಲಿ 41 ಎಕರೆ ಪರಿಮಳ ಉದ್ಯಾನ ಮತ್ತು ಸಿತಾರ್ ಗಂಜ್ ನಲ್ಲಿ 40 ಎಕರೆ ಪ್ಲಾಸ್ಟಿಕ್ ಕೈಗಾರಿಕಾ ಉದ್ಯಾನವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ.

ನೈನಿತಾಲ್‌ನ ರಾಮನಗರದಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 7 ಎಂಎಲ್ ಡಿ ಮತ್ತು 1.5 ಎಂಎಲ್ ಡಿ ಸಾಮರ್ಥ್ಯದ ಎರಡು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.