Friday, 22nd November 2024

BRICS Summit 2024 : ಚೀನಾ- ಭಾರತ ಸೌಹಾರ್ದತೆಗೆ ಪುಷ್ಟಿ; ಬ್ರಿಕ್ಸ್ ಸಭೆಯ ವೇಳೆ ಮೋದಿ- ಕ್ಸಿ ಜಿನ್‌ಪಿಂಗ್‌ ಮಾತುಕತೆ

Bilateral Meet At BRICS

ನವದೆಹಲಿ: ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ (BRICS Summit 2024 ) ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು 2020ರ ಗಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ಹಾಗೂ ಚೀನಾ ನಡುವಿನ ಬಿಕ್ಕಟ್ಟು ಮಾತುಕತೆಯ ಬಳಿಕ ಕೊನೆಗೊಂಡ ಹಿನ್ನೆಲೆಯಲ್ಲಿ ಈ ಭೇಟಿಯು ವಿಶೇಷ ಎನಿಸಲಿದೆ.

ಭಾರತ ಮತ್ತು ಚೀನಾ ಶಾಂತಿಯ ಮಂತ್ರ ಪಠಿಸಲು ಆರಂಭಿದ ಕೆಲವೇ ಕ್ಷಣಗಳಲಲಿ ಶ್ರೀ ಮಿಸ್ರಿ ಅವರು ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಬ್ರಿಕ್ಸ್ ಶೃಂಗಸಭೆಯ ಹೊರತಾಗಿ ನಾಳೆ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ ಎಂಬುದನ್ನು ಖಚಿತಪಡಿಸುವೆ ” ಎಂದು ಅವರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

2020 ರ ಗಲ್ವಾನ್ ಘರ್ಷಣೆಯ ನಂತರ ಉಭಯ ನಾಯಕರ ನಡುವೆ ಕೇವಲ ಒಂದು ಔಪಚಾರಿಕ ಸಭೆ ನಡೆದಿತ್ತು. 2023ರ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ವೇಳೆ ಈ ಭೇಟಿ ನಡೆದಿತ್ತು. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ವೇಳೆ ಪರಸ್ಪರ ಭೇಟಿಯಾಗಿದ್ದಷ್ಟೆ.

ಗಸ್ತು ವ್ಯವಸ್ಶೆಯಲ್ಲಿ ಪ್ರಗತಿ

ಗಲ್ವಾನ್ ಕಣಿವೆ ಘರ್ಷಣೆಯ ನಾಲ್ಕು ವರ್ಷಗಳ ನಂತರ ಗಸ್ತು ವ್ಯವಸ್ಥೆಯಲ್ಲಿ ಪ್ರಗತಿ ಕಂಡುಬಂದಿದೆ. ಎರಡೂ ದೇಶಗಳು ಸಾವಿರಾರು ಸೈನಿಕರನ್ನು ನಿಯೋಜಿಸಿರುವ ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆಯಾಗಲಿದೆ. 2020ಕ್ಕಿಂತ ಹಿಂದಿನ ವ್ಯವಸ್ಥೆ ಮುಂದುವರಿಯಲಿದೆ. ಈ ವ್ಯವಸ್ಥೆಯು ಉಭಯ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸಲಿದೆ.

ಇದನ್ನೂ ಓದಿ: India-China Border: ಭಾರತ ಚೀನಾ ನಡುವೆ ಗಡಿ ಗಸ್ತು ಒಪ್ಪಂದ ಏಕೆ ಮುಖ್ಯ?

2020ರ ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆ ನಡೆಸಿದ್ದರು. ಎರಡೂ ಕಡೆಯವರು ಸಾವುನೋವುಗಳನ್ನು ಅನುಭವಿಸಿದ್ದರು. ಇದರಿಂದಾಗಿ ನವದೆಹಲಿ ಮತ್ತು ಬೀಜಿಂಗ್ ನಡುವಿನ ಸಂಬಂಧ ಹಾಳಾಗಿತ್ತು.

ನಾಲ್ಕು ವರ್ಷಗಳಿಂದ ಉಭಯ ದೇಶಗಳ ನಡುವೆ ನೇರ ವಿಮಾನ ಹಾರಾಟ ನಡೆದಿರಲಿಲ್ಲ. ಚೀನಾದ ಕಂಪನಿಗಳಿಂದ ಬರಬೇಕಾದರೆ ವೀಸಾಗೆ ಹೆಚ್ಚಿನ ಪರಿಶೀಲನೆ ಮಾಡಬೇಕಾಗಿತ್ತು.