Sunday, 15th December 2024

Twitter(X) ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ 10 ಕೋಟಿ ಫಾಲೋವರ‍್ಸ್

ವದಹೆಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅವರು ಮತ್ತೊಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) 100 ಮಿಲಿಯನ್ ಅಂದರೆ 10 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಏಕೈಕ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ (38.1 ಮಿಲಿಯನ್ ಅನುಯಾಯಿಗಳು), ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ (11.2 ಮಿಲಿಯನ್ ಅನುಯಾಯಿಗಳು) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್ ಅನುಯಾಯಿಗಳು) ಅವರಂತಹ ಇತರ ವಿಶ್ವ ನಾಯಕರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಬಹಳ ಮುಂದಿದ್ದಾರೆ. ಇನ್ನು ಈ ವಿಚಾರವಾಗಿ ಪೋಸ್ಟ್​​ ಮಾಡುವ ಮೂಲಕ ಪ್ರಧಾನಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಪಿಎಂ ಮೋದಿಯವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಪಂಚದಾದ್ಯಂತದ ನಾಯಕರು ಪ್ರಧಾನಿ ಮೋದಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದರೆ. ಇದರಿಂದ ತಮ್ಮದೇ ಆದ ಫಾಲೋವರ್ಸ್​​​, ವೀಕ್ಷಣೆಗಳು ಮತ್ತು ಮರುಪೋಸ್ಟ್‌ಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಇತ್ತೀಚೆಗೆ ಇಟಲಿ ಮತ್ತು ಆಸ್ಟ್ರಿಯಾದಲ್ಲೂ ಇದು ಕಂಡುಬಂದಿದೆ.

ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಸಾಮಾಜಿಕ ಜಾಲತಾಣದ ಎಕ್ಸ್​​​ ಖಾತೆಯಲ್ಲಿ ಸುಮಾರು 30 ಮಿಲಿಯನ್ ಬಳಕೆದಾರರ ಹೆಚ್ಚಳ ಕಂಡುಬಂದಿದೆ. ಅವರ ಪ್ರಭಾವವು ಯೂಟ್ಯೂಬ್​​ ಮತ್ತು ಇನ್​ಸ್ಟಾಗ್ರಾಮ್​​ಗೂ ವಿಸ್ತರಿಸಿದೆ. ಅಲ್ಲಿ ಅವರು ಸುಮಾರು 25 ಮಿಲಿಯನ್ ಚಂದಾದಾರರನ್ನು ಮತ್ತು 91 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

See alsoಉಗ್ರ ರೂಪ ತಾಳುತ್ತಿರುವ ‘ಯುಮುನಾ’ ; ಇದು ದೆಹಲಿಗೆ ಒಳ್ಳೆಯ ಸುದ್ದಿಯಲ್ಲ ಎಂದ ಅರವಿಂದ್ ಕೇಜ್ರಿವಾಲ್

ಇನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ 26.4 ಮಿಲಿಯನ್ ಫಾಲೋವರ್ಸ್​​​​ ಇದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 27.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (19.9 ಮಿಲಿಯನ್), ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (7.4 ಮಿಲಿಯನ್), ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ (2.9 ಮಿಲಿಯನ್) ಅನುಯಾಯಿಗಳನ್ನು ಹೊಂದಿದ್ದಾರೆ.