Sunday, 15th December 2024

ಪ್ರಧಾನಿ ಮೋದಿ ಸೋಲನ್ನಪ್ಪುವುದು ಖಚಿತ: ಲಾಲೂ ಪ್ರಸಾದ್‌ ಯಾದವ್‌

ಟ್ನಾ : ಲೋಕಸಭಾ ಚುನಾವಣೆಯ ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗಲಿದ್ದು ಪ್ರಧಾನಿ ಮೋದಿ ಸೋಲನ್ನಪ್ಪುವುದು ಖಚಿತ ಎಂದು ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್‌ ಯಾದವ್‌ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಬಿಹಾರದಲ್ಲಿಮಾತನಾಡಿದ ಅವರು, ಜೂ.4 ರಂದು ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುವುದು ಖಂಡಿತ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಅವತಾರ ಪುರುಷ ಎಂದು ಭಾವಿಸಿದ್ದಾರೆ. ತಾನು ಜೈವಿಕವಾಗಿ ಹುಟ್ಟಿಲ್ಲ. ತಾನೊಬ್ಬ ಅವತಾರ ಪುರುಷ ಎಂದು ಹೇಳಿದ್ದಾರೆ. ಜೂನ್ 4 ರಂದು ಫಲಿತಾಂಶ ಹೊರಬಂದ ಬಳಿಕ ಅವರ ಪರಿಸ್ಥಿತಿ ಗೊತ್ತಾಗಲಿದೆ ಎಂದರು.

ಪ್ರಧಾನಿ ಮೋದಿ ಅವರ ಹತ್ತು ವರ್ಷದ ಕಾರ್ಯವೈಖರಿ ನಿಮಗೆ ತೃಪ್ತಿ ತಂದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.