ನವದೆಹಲಿ : ಆಗಸ್ಟ್ 1 ರಿಂದ ಮತ್ತೆ ಆಮ್ ಆದ್ಮಿ ಪಕ್ಷದ ಹಳೆಯ ಮದ್ಯ ನೀತಿಯು ಜಾರಿಗೆ ಬರಲಿದೆ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದಿಂದ (ಇಒಡಬ್ಲ್ಯು) ನಡೆಯು ತ್ತಿರುವ ತನಿಖೆ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ದೆಹಲಿ ಸರ್ಕಾರದ ನಡುವಿನ ಮುಖಾಮುಖಿಯ ನಡುವೆ ರಾಷ್ಟ್ರ ರಾಜಧಾನಿ ಯಲ್ಲಿನ ಮದ್ಯ ನೀತಿಯ ಸುದ್ದಿ ಹೊಸ ತಿರುವು ಪಡೆದುಕೊಂಡಿದೆ.
ದೆಹಲಿ ಸರ್ಕಾರವು ಮುಂದಿನ ಆರು ತಿಂಗಳ ಕಾಲ ಚಿಲ್ಲರೆ ಮದ್ಯ ಮಾರಾಟದ ಹಳೆಯ ನೀತಿ ಮುಂದುವರಿಸಲು ನಿರ್ಧರಿಸಿದೆ.
ಸರ್ಕಾರದ ನೂತನ ಮದ್ಯ ನೀತಿಯನ್ನು ಸಮರ್ಥಿಸಿಕೊಂಡಿರುವ ಸಿಸೋಡಿಯಾ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶ ದಿಂದ ಈ ನೀತಿ ಜಾರಿಯಾಗಿದೆ ಎಂದು ಹೇಳಿದ್ದಾರೆ.
ಅಬಕಾರಿ ಖಾತೆ ಹೊಂದಿರುವ ಸಿಸೋಡಿಯಾ, ಹೊಸ ನೀತಿಯನ್ನು ಜಾರಿಗೆ ತರುವವರೆಗೆ ಆರು ತಿಂಗಳ ಅವಧಿಗೆ ಅಬಕಾರಿ ನೀತಿಯ ಹಳೆಯ ನೀತಿಯೇ ಮುಂದುವರೆಸುವಂತೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗುತ್ತಿದೆ.
ದೆಹಲಿಯಲ್ಲಿ ಕಾನೂನುಬದ್ಧ ಮದ್ಯ ಮಾರಾಟ ಮುಚ್ಚಿದರೆ ರಾಷ್ಟ್ರ ರಾಜಧಾನಿ ಗುಜರಾತಿನಲ್ಲಿ ನಡೆದ ದುರಂತಕ್ಕೆ ಸಾಕ್ಷಿಯಾ ಗಬಹುದು ಎಂದು ಹೇಳಿದರು. ಹೊಸ ಮದ್ಯ ನೀತಿಯ ಬದಲಿಗೆ ಹಳೆಯ ಮದ್ಯದ ನೀತಿಯ ಮೂಲಕ ಮದ್ಯವನ್ನು ಮಾರಾಟ ಮಾಡಲಾಗುವುದು ಎಂದು ಸಿಸೋಡಿಯಾ ಹೇಳಿದ್ದಾರೆ.