Thursday, 12th December 2024

ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ಮತದಾನ: ಇಂತಿಷ್ಟು ಮತ ಚಲಾವಣೆ ?

ಕೋಲ್ಕತ್ತಾ: ಗುರುವಾರ ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಆರನೇ ಹಂತದ ಮತದಾನ ನಡೆಯು ತ್ತಿದ್ದು, ಮಧ್ಯಾಹ್ನ ವೇಳೆಗೆ ಶೇ.57.30ರಷ್ಟು ಮತದಾನವಾಗಿದೆ.

ಉತ್ತರ ದಿನಜ್ ಪುರ್ ಚೋಪ್ರಾ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯ ಕರ್ತರ ನಡುವೆ ಮತಗಟ್ಟೆ ಬಳಿ ಏಜೆಂಟ್ ನಿಂದನೆ ಮಾಡಿದ್ದಾರೆ ಎಂಬ ವಿಷಯಕ್ಕೆ ಘರ್ಷಣೆಯುಂಟಾಗಿ ಅನಿರೀಕ್ಷಿತ ಗುಂಡಿನ ದಾಳಿ ನಡೆದಿದೆ.

ಬರ್ರಕ್ ಪೊರೆಯಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದ ಪ್ರಕರಣ ನಡೆದಿದೆ. ಬಿಜಾಪುರ್ ಕ್ಷೇತ್ರದಲ್ಲಿ ಟಿಎಂಸಿ ಕಾರ್ಯಕರ್ತ ಮದಬ್ ದಾಸ್ ಅವರ ಮೇಲೆ ಬಿಜೆಪಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.

43 ವಿಧಾನಸಭಾ ಕ್ಷೇತ್ರಗಳು ಆರನೇ ಹಂತದಲ್ಲಿ ಮತದಾನಕ್ಕೆ ಒಳಪಟ್ಟಿದ್ದು ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗು ತ್ತಿವೆ. ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಮತದಾನ ಏ.29ರಂದು ನಡೆಯಲಿದ್ದು ಮತ ಎಣಿಕೆ ಮೇ 2ರಂದು ನಡೆದು ಫಲಿತಾಂಶ ಪ್ರಕಟವಾಗಲಿದೆ.