ನೆರೆಯ ತೆಲಂಗಾಣದ ಮಹಿಳೆಯರು ರಾಜ್ಯದ ಪಲ್ನಾಡು ಜಿಲ್ಲೆಯ ಪುಲಿಪಾಡು ಗ್ರಾಮಕ್ಕೆ ಮೆಣಸಿನಕಾಯಿ ಕೊಯ್ಲು ಮಾಡಲು ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಗುಡೂರು ಕಡೆಯಿಂದ ಲಖನೌ ಕಡೆಗೆ ಹೋಗುತ್ತಿದ್ದ ನಿಂಬೆ ಹಣ್ಣು ತುಂಬಿದ್ದ ಟ್ರಕ್ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದೆ ಮತ್ತು ವಾಹನವನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ.
ಗಾಯಾಳುಗಳನ್ನು ತೆಲಂಗಾಣದ ಮಿರಿಯಾಲಗುಡಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಎಲ್ಲಾ ಆರು ಮಹಿಳೆಯರು ತ್ರಿಚಕ್ರ ವಾಹನ ಆಟೋದಲ್ಲಿ ಪ್ರಯಾಣಿಸುತ್ತಿದ್ದ 12 ಸದಸ್ಯರ ಗುಂಪಿನ ಭಾಗವಾಗಿ ದ್ದರು. ಐಪಿಸಿ ಸೆಕ್ಷನ್ 304 (ಎ) ಮತ್ತು 337 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.