Friday, 22nd November 2024

ಎಲ್ಲಾ ಟಿವಿ ಸ್ಕ್ರೀನ್‌ಗಳಲ್ಲಿ ಫೋರ್ನ್ ಕ್ಲಿಪ್ ಪ್ರದರ್ಶನ: ಪ್ರಯಾಣಿಕರು ತಬ್ಬಿ‌ಬ್ಬು

ಪಾಟ್ನಾ: ಬಿಹಾರದ ಪಾಟ್ನಾದ ರೈಲು ನಿಲ್ದಾಣದ ಸಿಬ್ಬಂದಿಯ ಯಡವಟ್ಟಿನಿಂದ ಎಲ್ಲಾ ಟಿವಿ ಸ್ಕ್ರೀನ್‌ಗಳಲ್ಲಿ ಫೋರ್ನ್ ಕ್ಲಿಪ್ ಪ್ರದರ್ಶನವಾದ್ದರಿಂದ ಪ್ರಯಾಣಿಕರು ಕೆಲ ಹೊತ್ತು ತಬ್ಬಿಬ್ಬಾದ ಘಟನೆ ನಡೆದಿದೆ.

ರೈಲು ನಿಲ್ದಾಣದ 10 ಪ್ಲಾಟ್ ಫಾರಂಗಳಲ್ಲಿ ಅಳವಡಿಸಲಾಗಿದ್ದ ಎಲ್ಲಾ ಟಿವಿ ಸ್ಕ್ರೀನ್‌ಗಳಲ್ಲಿ ಫೋರ್ನ್ ದೃಶ್ಯದ ಕ್ಲಿಪ್ ಪ್ರದರ್ಶನವಾಗಿದ್ದು, ಮೂರು ನಿಮಿಷಗಳ ಕಾಲ ಅಶ್ಲೀಲ ವಿಡಿಯೋ ಪ್ರಸಾರ ಆಗಿದೆ.

ಡಣಾಪುರ ವಿಭಾಗದ ರೈಲು ನಿಲ್ದಾಣಗಳಲ್ಲಿ ವೀಡಿಯೊ ಮತ್ತು ಚಲನಚಿತ್ರಗಳನ್ನು ಪ್ರಸಾರ ಮಾಡುವ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡ ಲಾಗಿದೆ. ಇದರ ಸಿಬ್ಬಂದಿಯ ಯಡವಟ್ಟಿನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಬಳಿಕ ತಕ್ಷಣ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಖಾಸಗಿ ಕಂಪನಿಯಾದ ದತ್ತಾ ಕಮ್ಯುನಿಕೇಷನ್ ಅಧಿಕಾರಿಗಳನ್ನು ಸಂಪರ್ಕಿಸಿ ವಿಡಿಯೋ ಪ್ರಸಾರವನ್ನು ನಿಲ್ಲಿಸಲು ಸೂಚಿಸಿದ್ದಾರೆ.

ರೈಲು ನಿಲ್ದಾಣದಲ್ಲಿ ನಡೆದ ಅಚಾತುರ್ಯ ಘಟನೆಯನ್ನು ದೃಢಪಡಿಸಿದ ಡಣಾಪುರ ಡಿಆರ್‌ಎಂ ಕಚೇರಿಯ ಅಧಿಕೃತ ವಕ್ತಾರ ಪ್ರಭಾತ್ ಕುಮಾರ್, ಈ ಘಟನೆಯ ತನಿಖೆ ಕೈಗೆತ್ತಿಕೊಂಡಿದ್ದೇವೆ. ಜೊತೆ ಆ ಕಂಪನಿ ಜೊತೆಗಿನ ಒಪ್ಪಂದ ರದ್ದತಿ ಪ್ರಕ್ರಿಯೆ ಆರಂಭಿಸಲಾಗಿದೆ. ಕಂಪನಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ.