Tuesday, 22nd October 2024

Autoimmune Disorder : ಕೊರೊನಾ ಬಳಿಕ ರೋಗ ನಿರೋಧಕ ಶಕ್ತಿಯಲ್ಲಿ ಗಣನೀಯ ಇಳಿಕೆ; ಸಂಶೋಧನೆ ವರದಿ

ನವದೆಹಲಿ: ಕೋವಿಡ್ -19 ಸಮಯದಲ್ಲಿಉಂಟಾದ ಸಮಸ್ಯೆಗಿಂತಲೂ ಹೆಚ್ಚಾಗಿ ದೀರ್ಘಾವಧಿ ಪರಿಣಾಮ ಕಾಡತೊಡಗಿವೆ. ಪ್ರಮುಖವಾಗಿ ಮಕ್ಕಳಲ್ಲಿ ರೋಗ ನಿರೋಧಕ (Autoimmune Disorder) ಶಕ್ತಿಯಲ್ಲಿ ಅಸಾಮಾನ್ಯ ಏರುಪೇರು ಉಂಟಾಗಿದೆ. ಇಂಟರ್‌ನ್ಯಾಷನಲ್‌ ಜರ್ನಲ್ ಆಫ್ ಕ್ಲಿನಿಕಲ್ ಬಯೋಕೆಮಿಸ್ಟ್ರಿ ಅಂಡ್ ರೀಸರ್ಚ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಸಾಂಕ್ರಾಮಿಕ ರೋಗದ ನಂತರ ಭಾರತೀಯರಲ್ಲಿ ನಿರೋಧಕ ಅಸ್ವಸ್ಥತೆಗಳಲ್ಲಿ ಶೇಕಡಾ 30 ಹೆಚ್ಚಾಗಿದೆ.

ಮೆಟ್ರೋಪಾಲಿಸ್ ಹೆಲ್ತ್ಕೇರ್ ನಡೆಸಿದ ಸಂಶೋಧನೆಯಲ್ಲಿ, 2019ರಿಂದ ಕೋವಿಡ್ ಪೂರ್ವ 50,457 ಮತ್ತು 2022ರ ಬಳಿಕ ಅಂದರೆ ಕೋವಿಡ್ ನಂತರದ 72,845 ಪ್ರಕರಣಗಳು ಸೇರಿದಂತೆ 1.2 ಲಕ್ಷ ಪ್ರಕರಣಗಳನ್ನು ವಿಶ್ಲೇಷಿಸಿ ಹೊಸ ವರದಿ ನೀಡಲಾಗಿದೆ.

ಸ್ವಯಂ ರೋಗ ನಿರೋಧ ಸಮಸ್ಯೆಯನ್ನು ನಿರ್ಧರಿಸಲು ಆಂಟಿನ್ಯೂಕ್ಲಿಯರ್ ಆಂಟಿಬಾಡಿ (ಎಎನ್ಎ) ವರದಿಯನ್ನು ಬಳಸಲಾಗುತ್ತದೆ. ಇದು ಹೆಚ್ಚಾದರೆ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. 2019ರಲ್ಲಿ ಶೇಕಡಾ 39.3ರಷ್ಟು ಪ್ರಕರಣಗಳು ಎಎನ್ಎ-ಪಾಸಿಟಿವ್ ಆಗಿದ್ದರೆ, 2022 ರ ವೇಳೆಗೆ ಆ ಸಂಖ್ಯೆ ಶೇಕಡಾ 69.6 ಕ್ಕೆ ಏರಿಕೆಯಾಗಿತ್ತು. ಅದಲ್ಲದೆ ನ್ಯೂಕ್ಲಿಯರ್ ಹೋಮೋಜೆನಿಯಸ್  ಶೇಕಡಾ 9 ರಷ್ಟು ಏರಿಕೆಯಾಗಿದೆ. ಇದು ಸಿಸ್ಟಮಿಕ್ ಲ್ಯೂಪಸ್ ಎರಿಥೆಮಾಟೋಸಸ್ (ಎಸ್ಎಲ್ಇ) ಮತ್ತು ರುಮಟಾಯ್ಡ್ ಸಂಧಿವಾತದ ಮಾನದಂಡವಾಗಿದೆ.

31-45 ವರ್ಷ ವಯಸ್ಸಿನವರಲ್ಲಿ ಅತಿ ಹೆಚ್ಚು ಎಎನ್ಎ ಪಾಸಿಟಿವಿಟಿ ಪ್ರಕರಣಗಳು ಕಂಡು ಬಂದರೆ 46-60 ವರ್ಷ ವಯಸ್ಸಿನವರಲ್ಲಿ ಇನ್ನೂ ಹೆಚ್ಚಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಎರಡೂ ಅವಧಿಗಳಲ್ಲಿ ನಿರಂತರವಾಗಿ ಹೆಚ್ಚಿನ ಎಎನ್ಎ ಪಾಸಿಟಿವ್‌ ಆಗಿತ್ತು.

ಸ್ವಂತ ಅಂಗಾಶಕ್ಕೆ ಹಾನಿ

ಕೋವಿಡ್ -19 ರೋಗನಿರೋಧಕ ಶಕ್ತಿ ಹೇಗೆ ಹೆಚ್ಚು ದುರ್ಬಲಗೊಳಿಸಿದೆ ಎಂಬುದನ್ನು ಅಧ್ಯಯನ ಹೇಳಿದೆ. ಕೆಲವು ಸಂದರ್ಭಗಳಲ್ಲಿ ದೇಹದ ಸ್ವಂತ ಅಂಗಾಂಶಗಳಿಗೆ ಹಾನಿ ಮಾಡಿದೆ. ಕೋವಿಡ್ -19 ರ ನಂತರ ಎಎನ್ಎ ಪಾಸಿಟಿವಿಟಿ ಏರಿಕೆಯು ವೈರಸ್‌ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ದಿಢೀ ಏರಿಕೆಯಾಗಿರುತ್ತದೆ.

ಹೆಚ್ಚಿದ ಪ್ರತಿರಕ್ಷಣಾ ಚಟುವಟಿಕೆಯು ದೇಹವು ತನ್ನದೇ ಅಂಗಾಂಶಗಳ ಮೇಲೆ ತಪ್ಪಾಗಿ ತಿಳಿದು ದಾಳಿ ಮಾಡುತ್ತದೆ. ಇದು ಸ್ವಯಂ ನಿರೋಧಕ ಕಾಯಿಲೆಗಳನ್ನು ಪ್ರಚೋದಿಸುತ್ತದೆ. ಸಾಂಕ್ರಾಮಿಕ ರೋಗದ ನಂತರ ಸ್ವಯಂ ನಿರೋಧಕ ಪರಿಸ್ಥಿತಿಗಳಲ್ಲಿ ಉಲ್ಬಣವನ್ನು ಗಮನಿಸಿದ್ದಾರೆ.

ಮೆಟ್ರೋಪಾಲಿಸ್ನ ಮುಖ್ಯ ವಿಜ್ಞಾನ ಮತ್ತು ನಾವೀನ್ಯತೆ ಅಧಿಕಾರಿ ಡಾ.ಕೀರ್ತಿ ಚಡ್ಡಾ, “ಕೋವಿಡ್ -19 ಸಾಂಕ್ರಾಮಿಕ ರೋಗವು ಜಾಗತಿಕ ಆರೋಗ್ಯದ ಮೇಲೆ ಶಾಶ್ವತ ಪರಿಣಾಮ ಬೀರಿದೆ, ಮತ್ತು ಅದರ ಪರಿಣಾಮಗಳು ವೈರಸ್ ಅನ್ನು ಮೀರಿ ವಿಸ್ತರಿಸುತ್ತವೆ ಎಂದು ನಮ್ಮ ಅಧ್ಯಯನವು ತೋರಿಸುತ್ತದೆ” ಎಂದು ಹೇಳಿದರು.