Thursday, 14th November 2024

Post Office Scheme: ಆಕರ್ಷಕ ಬಡ್ಡಿ ನೀಡುವ ಪೋಸ್ಟ್ ಆಫೀಸ್‌ನ ಐದು ಯೋಜನೆಗಳಿವು

Post Office Scheme

ಕೈಯಲ್ಲಿ ಸ್ವಲ್ಪ ಕಾಸಿದ್ದರೆ ಎಲ್ಲಾದರೂ ಸುರಕ್ಷಿತವಾಗಿ ಹೂಡಿಕೆ (Investment) ಮಾಡೋಣ ಎಂದೆನಿಸುತ್ತದೆ. ಎಲ್ಲಿ ಎಂದು ಯೋಚಿಸುತ್ತಲೇ ಹತ್ತಿರದ ಬ್ಯಾಂಕ್, ಪೋಸ್ಟ್ ಆಫೀಸ್‌ನತ್ತ (Post office) ಹೆಜ್ಜೆ ಹಾಕುತ್ತೇವೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಿಂತಲೂ ಪೋಸ್ಟ್ ಆಫೀಸ್‌ನ (Post Office Scheme) ಕೆಲವು ಯೋಜನೆಗಳು ಆಕರ್ಷಕ ಬಡ್ಡಿ ದರದಿಂದಾಗಿ ಸಾಕಷ್ಟು ಮಂದಿಯನ್ನು ತನ್ನತ್ತ ಸೆಳೆಯುತ್ತಿದೆ.

ಪೋಸ್ಟ್ ಆಫೀಸ್‌ನ ಹಲವು ಯೋಜನೆಗಳು ಆಕರ್ಷಕ ಬಡ್ಡಿ ದರದಿಂದಾಗಿ ಸಾಕಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಒಂದು ವೇಳೆ ನೀವು ಕೂಡ ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಮಾಡುವ ಯೋಚನೆ ಮಾಡುತ್ತಿದ್ದರೆ ಶೇ. 8.2ರವರೆಗೆ ಬಡ್ಡಿ ನೀಡುವ 5 ಪ್ರಮುಖ ಉಳಿತಾಯ ಯೋಜನೆಗಳಿವೆ.

ಪೋಸ್ಟ್ ಆಫೀಸ್ ಈ ಯೋಜನೆಗಳು ನಿಮ್ಮನ್ನು ಬೆರಗುಗೊಳಿಸುವುದು ಗ್ಯಾರಂಟಿ. ಈ ಉಳಿತಾಯ ಯೋಜನೆಯು ಸಣ್ಣ ಹೂಡಿಕೆದಾರರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಈ ಯೋಜನೆಗಳು ಸುಲಭವಾಗಿ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಆದಾಯವನ್ನು ಕೊಡುತ್ತವೆ. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಹೂಡಿಕೆದಾರರಿಗೆ ಶೇ. 8.2ರವರೆಗೆ ಬಡ್ಡಿ ದರವನ್ನು ನೀಡುತ್ತವೆ. ಈ ಯೋಜನೆಗಳಲ್ಲಿ ಹೆಚ್ಚಿನವು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಹೊಂದಿದೆ.

Post Office Scheme

ಮಾಸಿಕ ಆದಾಯ ಯೋಜನೆ

ಪೋಸ್ಟ್ ಆಫೀಸ್‌ನಲ್ಲಿ ಲಭ್ಯವಿರುವ ಮಾಸಿಕ ಆದಾಯ ಯೋಜನೆಯು ಹೂಡಿಕೆದಾರರಿಗೆ ಸ್ಥಿರ ಆದಾಯವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತದೆ. ಒಬ್ಬ ವ್ಯಕ್ತಿ ಕನಿಷ್ಠ 1,500 ರೂ.ನಿಂದ ಗರಿಷ್ಠ 9 ಲಕ್ಷ ರೂ. ವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು. ಅನಂತರ ಜಂಟಿ ಖಾತೆಗಳ ಗರಿಷ್ಠ ಮಿತಿ 15 ಲಕ್ಷ ರೂ.. ಇದಕ್ಕೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ. ಬಡ್ಡಿ ದರವು ವಾರ್ಷಿಕ ಶೇ. 7.4 ಆಗಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಇತರ ಸ್ಥಿರ ಆದಾಯದ ಸಾಧನಗಳಂತೆ ಸಂಪೂರ್ಣ ಬಂಡವಾಳ ಭದ್ರತೆಯೊಂದಿಗೆ ಖಾತರಿಪಡಿಸುವ ಹೂಡಿಕೆ ಮತ್ತು ಉಳಿತಾಯ ಯೋಜನೆಯಾಗಿದೆ. ಯಾವುದೇ ವ್ಯಕ್ತಿ ಒಂದು ಖಾತೆಯನ್ನು ಅಥವಾ ಮೂವರು ವ್ಯಕ್ತಿಗಳು ಜಂಟಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕ ಅಥವಾ ಅನಾರೋಗ್ಯದ ವ್ಯಕ್ತಿಗಳ ಪೋಷಕರು ಈ ಖಾತೆಯನ್ನು ನಡೆಸಬಹುದು. ಇದು ವಾರ್ಷಿಕವಾಗಿ ಶೇ 7.7 ಬಡ್ಡಿ ದರವನ್ನು ನೀಡುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಭಾರತ ಸರ್ಕಾರದಿಂದ ಬೆಂಬಲಿತವಾಗಿದೆ. ಭಾರತದಲ್ಲಿ ನೆಲೆಸಿರುವ ಹಿರಿಯ ನಾಗರಿಕರು ಈ ಖಾತೆಯನ್ನು ತೆರೆಯಬಹುದು. ಯೋಜನೆಯಲ್ಲಿ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬಹುದು. ಈ ಖಾತೆಯು ವೈಯಕ್ತಿಕ ಅಥವಾ ಜಂಟಿಯಾಗಿರಬಹುದು. ಇದು ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ. ಶೇ. 8.2 ಬಡ್ಡಿ ದರವನ್ನು ಒದಗಿಸುತ್ತದೆ.

Post Office Scheme

ಮಹಿಳಾ ಉಳಿತಾಯ ಪ್ರಮಾಣ ಪತ್ರ

ಮಹಿಳಾ ಸಮ್ಮಾನ್ ಚೇತನ್ ಪ್ರಮಾಣ ಪತ್ರವು ಭಾರತೀಯ ಮಹಿಳೆಯರಲ್ಲಿ ಉಳಿತಾಯದ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸರ್ಕಾರವು ಪ್ರಾರಂಭಿಸಿದ ಉಪಕ್ರಮವಾಗಿದೆ. ಆದರೆ ಈ ಯೋಜನೆಯಲ್ಲಿ ಯಾವುದೇ ತೆರಿಗೆ ವಿನಾಯಿತಿ ಇಲ್ಲ. ಇದು ವಾರ್ಷಿಕ ಶೇ. 7.5 ಬಡ್ಡಿದರವನ್ನು ನೀಡುತ್ತದೆ.

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿ ಮಗಳನ್ನು ಲಕ್ಷಾಧಿಪತಿಯನ್ನಾಗಿ ಮಾಡಿ!

ಕಿಸಾನ್ ವಿಕಾಸ್ ಪತ್ರ

ಕಿಸಾನ್ ವಿಕಾಸ್ ಪತ್ರವು ಭಾರತ ಸರ್ಕಾರ ನೀಡಿದ ಉಳಿತಾಯ ಪ್ರಮಾಣ ಪತ್ರವಾಗಿದೆ. ಈ ಯೋಜನೆಯು ನಿಶ್ಚಿತ ಬಡ್ಡಿ ದರ ಮತ್ತು ಖಾತರಿಯ ಆದಾಯವನ್ನು ನೀಡುತ್ತದೆ. ಆದರೆ, ಇದರಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ವಿನಾಯಿತಿ ಇರುವುದಿಲ್ಲ. ಇದು ವಾರ್ಷಿಕ ಶೇ. 7.5 ಬಡ್ಡಿ ದರವನ್ನು ನೀಡುತ್ತದೆ.