Wednesday, 11th December 2024

ಅನರ್ಹತೆ ಕ್ರಮಕ್ಕೆ ತಡೆ: ವಿಚಾರಣೆ ಜುಲೈ 11 ಕ್ಕೆ ಮುಂದೂಡಿಕೆ

ಮುಂಬೈ: ಮಹಾರಾಷ್ಟ್ರದ ಬಂಡಾಯ ಶಾಸಕರ ಅನರ್ಹತೆ ಪ್ರಶ್ನಿಸಿ ಏಕನಾಥ್‌ ಶಿಂಧೆ ಮತ್ತಿತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ಸುಪ್ರೀಂ ಅನರ್ಹತೆ ಕ್ರಮ ಕೈಗೊಳ್ಳದಂತೆ ತಡೆ ನೀಡಿ ವಿಚಾರಣೆಯನ್ನು ಜುಲೈ 11 ಕ್ಕೆ ಮುಂದೂಡಿದೆ.

ಬಂಡಾಯ ಶಾಸಕರ ಅನರ್ಹತೆ ಕೋರಿ ವಿಧಾನಸಭೆ ಡೆಪ್ಯೂಟಿ ಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ಈ ಶಾಸಕರುಗಳಿಗೆ ಡೆಪ್ಯೂಟಿ ಸ್ಪೀಕರ್‌ ನೋಟೀಸ್‌ ನೀಡಿದ್ದರು. ಹೀಗಾಗಿ ಉದ್ದವ್‌ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.