Saturday, 7th September 2024

ವಿದ್ಯುತ್ ಇಲಾಖೆ ನೌಕರರ ಮುಷ್ಕರ: ಕತ್ತಲೆಯಲ್ಲಿ ಚಂಡೀಗಢ

ಚಂಡೀಗಢ: ಕಳೆದ ಮೂರು ದಿನಗಳಿಂದ ವಿದ್ಯುತ್ ಇಲಾಖೆಯ ನೌಕರರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಭಾರೀ ವಿದ್ಯುತ್ ಕಡಿತದ ನಂತರ ಚಂಡಿಗಢದ ಬಹುತೇಕ ಭಾಗಗಳಲ್ಲಿ 36 ಗಂಟೆ ಗಳಿಗೂ ಅಧಿಕ ಸಮಯದಿಂದ ವಿದ್ಯುತ್ ಮತ್ತು ನೀರು ಪೂರೈಕೆ ಇಲ್ಲವಾಗಿದೆ.

ಕಳೆದ ಸೋಮವಾರ ಸಂಜೆಯಿಂದಲೇ ಸಾವಿರಾರು ಮನೆಗಳಿಗೆ ವಿದ್ಯುತ್, ನೀರು ಪೂರೈಕೆ ಇಲ್ಲವಾ ಗಿದ್ದು, ನಗರದ ಹಲವೆಡೆ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸರಕಾರಿ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ಗಳನ್ನು ಮರು ನಿಗದಿಪಡಿಸಿವೆ.

ನಮ್ಮಲ್ಲಿ ಜನರೇಟರ್‌ಗಳಂತೆ ಬ್ಯಾಕಪ್ ಯೋಜನೆ ಇದೆ. ಆದರೆ ಆಸ್ಪತ್ರೆಯ 100 ಪ್ರತಿಶತದಷ್ಟು ಲೋಡ್ ಅನ್ನು ಜನರೇಟರ್‌ನಲ್ಲಿ ಹಾಕಲು ಸಾಧ್ಯವಿಲ್ಲ. ಆದ್ದರಿಂದ, ನಾವು ನಮ್ಮ ಯೋಜಿತ ಶಸ್ತ್ರಚಿಕಿತ್ಸೆಗಳನ್ನು ಮರು ನಿಗದಿಪಡಿಸಬೇಕು ಅಥವಾ ಮುಂದೂಡಬೇಕಾಯಿತು ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಡಾ. ಸುಮನ್ ಸಿಂಗ್ ಹೇಳಿದ್ದಾರೆ. ವಿದ್ಯುತ್ ಕಡಿತವು ಆನ್‌ಲೈನ್ ತರಗತಿಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಸಹ ಮುಚ್ಚಿದೆ.

ವಿದ್ಯುತ್ ಇಲಾಖೆಯ ಖಾಸಗೀಕರಣ ವಿರೋಧಿಸಿ ವಿದ್ಯುತ್ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಸಲಹೆಗಾರ ಧರಂ ಪಾಲ್ ಅವರು ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಪವರ್ಮೆನ್ಸ್ ಯೂನಿಯನ್ ಜೊತೆ ಸಭೆ ನಡೆಸಿದರು. 

error: Content is protected !!