Thursday, 12th December 2024

ಪ್ರಕಾಶ್ ಸಿಂಗ್ ಬಾದಲ್ ನಿಧನ: ಇಂದು, ನಾಳೆ ಶೋಕಾಚರಣೆ

ಚಂಡೀಗಢ: ಪಂಜಾಬ್​ನ 5 ಬಾರಿಯ ಮುಖ್ಯಮಂತ್ರಿ, ಶಿರೋಮಣಿ ಅಕಾಲಿದಳದ ಹಿರಿಯ ರಾಜಕಾರಣಿ ಪ್ರಕಾಶ್ ಸಿಂಗ್ ಬಾದಲ್ (95) ಅವರು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು.

ಬಾದಲ್ ಅವರ ಮೃತದೇಹವನ್ನು ಚಂಡೀಗಢ ಸೆಕ್ಟರ್ 28 ರ ಶಿರೋ ಮಣಿ ಅಕಾಲಿದಳದ ಕಚೇರಿಯಲ್ಲಿ ಬುಧವಾರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು.

ಗುರುವಾರ ಅವರ ಹುಟ್ಟೂರಾದ ಬಾದಲ್​ನಲ್ಲಿ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 12 ಗಂಟೆಗೆ ಪಂಜಾಬ್​ಗೆ ಆಗಮಿಸಿ ಬಾದಲ್​ರ ಅಂತಿಮ ದರ್ಶನ ಪಡೆ ಯಲಿದ್ದಾರೆ.

ದೇಶದ ಹಿರಿಯ ರಾಜಕಾರಣಿಯಾಗಿದ್ದ ಪ್ರಕಾಶ್ ಸಿಂಗ್ ಬಾದಲ್ ನಿಧನಕ್ಕೆ ಸಂತಾಪ ಸೂಚಿಸಲು ಕೇಂದ್ರ ಸರ್ಕಾರ 2 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ದೇಶಾದ್ಯಂತ ಧ್ವಜವನ್ನು ಅರ್ಧಕ್ಕೆ ಹಾರಿಸ ಲಾಗುವುದು. ಎಲ್ಲಾ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಬಾದಲ್ ನಿಧನದ ಶೋಕಾಚರಣೆಯ ಹಿನ್ನೆಲೆಯಲ್ಲಿ ನಾಳೆ ರಾಜ್ಯದಲ್ಲಿ ರಜೆ ಘೋಷಿಸಲಾಗಿದೆ. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕಚೇರಿಗಳಿಗೆ ರಜೆ ನೀಡಲಾಗಿದೆ.

ಜಲಂಧರ್ ಲೋಕಸಭಾ ಉಪಚುನಾವಣೆ ಘೋಷಣೆಯಾಗಿದ್ದು, ತಯಾರಿಯಲ್ಲಿದ್ದ ರಾಜಕೀಯ ಪಕ್ಷಗಳಲ್ಲಿ ಶಿರೋಮಣಿ ಅಕಾಲಿದಳವು ಎರಡು ದಿನಗಳ ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಬಿಜೆಪಿ ಒಂದು ದಿನದ ಕಾರ್ಯಕ್ರಮಗಳನ್ನು ಕೈಬಿಟ್ಟಿದೆ.

ಪ್ರಕಾಶ್ ಸಿಂಗ್ ಬಾದಲ್ ಅವರು ಬರೋಬ್ಬರಿ 75 ವರ್ಷಗಳ ಯಶಸ್ವಿ ರಾಜಕೀಯ ಜೀವನ ನಡೆಸಿದ್ದಾರೆ.