Thursday, 12th December 2024

ದಿವಂಗತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಟಿಎಂಸಿ ಸೇರ್ಪಡೆ ಶೀಘ್ರ

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಕಾಂಗ್ರೆಸ್ ಸಂಸದರಾಗಿರುವ ದಿವಂಗತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ತೃಣಮೂಲ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ.

ಜಂಗೀಪುರದ ಮಾಜಿ ಕಾಂಗ್ರೆಸ್ ಸಂಸದ ಅಭಿಜಿತ್ ಮುಖರ್ಜಿ, ಕಳೆದ ಕೆಲವು ವಾರಗಳಿಂದ ಟಿ.ಎಂ.ಸಿ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ್ದಾರೆ. ಸೋಮವಾರದ ಬಳಿಕ ಅವರು ಟಿಎಂಸಿ ಪಕ್ಷಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ, ಕೋಲ್ಕತ್ತಾದಲ್ಲಿ ನಕಲಿ ಲಸಿಕೆ ವಿವಾದದ ಸಮಯದಲ್ಲಿ ಅಭಿಜಿತ್ ಮುಖರ್ಜಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಟ್ವಿಟರ್ʼನಲ್ಲಿ ಬೆಂಬಲ ವ್ಯಕ್ತ ಪಡಿಸುತ್ತಿರುವುದು ಕಂಡು ಬಂದಿದೆ. ‘ಐಎಎಸ್ ಅಧಿಕಾರಿ ದೇಬಂಜನ್ ದೇಬ್ ಅವರ ನಕಲಿ ಲಸಿಕೆ ಶಿಬಿರಕ್ಕೆ ದೀದಿ ಮಮತಾ ಬ್ಯಾನರ್ಜಿ ಅವರನ್ನು ವೈಯಕ್ತಿಕ ವಾಗಿ ದೂಷಿಸಬೇಕಾದರೆ, ಖಂಡಿತವಾಗಿಯೂ ನೀರವ್ ಮೋದಿ, ವಿಜಯ್ ಮಲ್ಯಾ, ಮೆಹುಲ್ ಚೋಕ್ಸಿ ಮುಂತಾದ ಎಲ್ಲಾ ಹಗರಣಗಳಿಗೆ ಮೋದಿಜೀ ಅವರನ್ನ ದೂಷಿಸಬೇಕು. ಆದ್ದರಿಂದ ವೈಯಕ್ತಿಕ ಕೃತ್ಯಕ್ಕಾಗಿ ಡಬ್ಲ್ಯೂಬಿ ಸರ್ಕಾರವನ್ನ ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದಿದ್ದರು.