Sunday, 15th December 2024

ಮೋದಿ ಯೂಟ್ಯೂಬ್ ಚಾನೆಲ್‌ ನಲ್ಲಿ ಪ್ರಾಣ್ ಪ್ರತಿಷ್ಠಾ 19 ಮಿಲಿಯನ್‌ ಲೈವ್ ವೀಕ್ಷಣೆ

ವದೆಹಲಿ: ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ರಾಮ್ ಲಲ್ಲಾ ಅವರ ಪ್ರಾಣ್ ಪ್ರತಿಷ್ಠಾ’ 19 ಮಿಲಿಯನ್‌ಗಿಂತಲೂ ಹೆಚ್ಚು ಲೈವ್ ವೀಕ್ಷಣೆಗಳೊಂದಿಗೆ ಜಾಗತಿಕ ದಾಖಲೆಯನ್ನು ನಿರ್ಮಿಸಿದೆ.

 ‘ಪಿಎಂ ಮೋದಿ ಲೈವ್ | ಅಯೋಧ್ಯೆ ರಾಮಮಂದಿರ ಲೈವ್ | ಶ್ರೀ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾ’ ಮತ್ತು ‘ಶ್ರೀ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾ ಲೈವ್ | ಪ್ರಧಾನಮಂತ್ರಿ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾದಲ್ಲಿ ಪಾಲ್ಗೊಂಡರು’ ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ಗೆ ಕ್ರಮವಾಗಿ 10 ಮಿಲಿಯನ್ ಮತ್ತು 9 ಮಿಲಿಯನ್ ಲೈವ್ ವೀಕ್ಷಣೆಗಳು ದೊರೆತಿವೆ.

ಚಂದ್ರಯಾನ-3 ಉಡಾವಣೆ, ಫಿಫಾ ವಿಶ್ವಕಪ್ 2023 ಪಂದ್ಯದ ಲೈವ್ ಸ್ಟ್ರೀಮಿಂಗ್ ಮೂಲಕ ಮಾಡಿದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.

ಆಗಸ್ಟ್ 23, 2023 ರಂದು ‘ಚಂದ್ರಯಾನ-3’ ಲ್ಯಾಂಡಿಂಗ್‌ನ ಲೈವ್ ಸ್ಟ್ರೀಮಿಂಗ್ ವಿಶ್ವಾದ್ಯಂತ 8.09 ಮಿಲಿಯನ್ ವೀಕ್ಷಣೆಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವಕಪ್ 2022 ಕ್ವಾರ್ಟರ್ ಫೈನಲ್ ಬ್ರೆಜಿಲ್ vs ಕ್ರೊಯೇಷಿಯಾ 6.14 ಮಿಲಿಯನ್ ವೀಕ್ಷಣೆಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಪ್ರಧಾನಿ ಮೋದಿ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 23,750 ವೀಡಿಯೊಗಳು ಮತ್ತು 472 ಕೋಟಿ ವೀಕ್ಷಣೆಗಳೊಂದಿಗೆ 2.1 ಕೋಟಿ ಚಂದಾದಾರರನ್ನು ಹೊಂದಿದ್ದಾರೆ.