ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ರ ಆಡಿಯೋ ಕ್ಲಿಪ್ ಅನ್ನು ಬಿಜೆಪಿ ನಾಯಕರು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಮಾಡಿದ್ದಾರೆ.
ಕ್ಲಬ್ ಹೌಸ್ ಚಾಟ್ನಲ್ಲಿ ಸ್ವತಃ ಪ್ರಶಾಂತ್ ಕಿಶೋರ್ ಬಂಗಾಳದಲ್ಲಿ ಮಮತಾರಷ್ಟೇ ಪ್ರಧಾನಿ ಮೋದಿ ಕೂಡ ಪ್ರಖ್ಯಾತಿ ಗಳಿಸಿ ದ್ದಾರೆ. ಪತ್ರಕರ್ತರೊಂದಿಗೆ ಪ್ರಶಾಂತ್ ಕಿಶೋರ್ ನಡೆಸಿದ ಚಾಟ್ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧದ ಆಕ್ರೋಶ, ರಾಜಕೀಯ ಧೃವೀಕರಣ ಹಾಗೂ ದಲಿತ ಮತಗಳು ಈ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವ ಮೂರು ಅಂಶಗಳಾಗಿವೆ ಎಂದು ಹೇಳಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ
https://www.facebook.com/Vishwavanidaily
ಆಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆಯೇ ಪ್ರಶಾಂತ್ ಕಿಶೋರ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು. ಬಿಜೆಪಿಗರು ನನ್ನ ಮಾತುಗಳನ್ನ ಅವರ ನಾಯಕರ ಮಾತುಗಳಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಕ್ಕೆ ನನಗೆ ಖುಷಿಯಾಗಿದೆ. ಪೂರ್ಣ ಸಂಭಾಷಣೆಯನ್ನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮಾಲ್ವಿಯಾ ಶೇರ್ ಮಾಡಿರುವ ಆಡಿಯೋ ತುಣುಕಿನಲ್ಲಿ, ಬಿಜೆಪಿಗೆ ಮೋದಿ ಹಾಗೂ ಹಿಂದೂ ಹೆಸರಿನಲ್ಲಿ ಮತಗಳು ಬೀಳುತ್ತವೆ. ರಾಜಕೀಯ ಧೃವೀಕರಣ, ದಲಿತ ಜನಾಂಗ, ಹಿಂದಿ ಮಾತನಾಡುವವರು ಇವೆಲ್ಲ ಬಿಜೆಪಿ ಗೆ ಲಾಭ ತರುವ ಅಂಶಗಳು. ಮೋದಿ ಈ ಭಾಗದಲ್ಲಿ ಹೆಚ್ಚು ಪ್ರಚಲಿತರಾಗಿದ್ದಾರೆ ಎಂದು ಕಿಶೋರ್ ಹೇಳಿದ್ದಾರೆ.