Sunday, 15th December 2024

’ಕೈ’ ಸೇರ್ಪಡೆಗೆ ಪ್ರಶಾಂತ್‌ ನಕಾರ

Prashant-Kishor

ನವದೆಹಲಿ : ಕಾಂಗ್ರೆಸ್ ಜೊತೆಗಿನ ಸರಣಿ ಸಭೆಗಳ ನಂತರ, ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರಲು ನಿರಾಕರಿಸಿದ್ದಾರೆ ಎಂದು ಪಕ್ಷದ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

‘ಪ್ರಶಾಂತ್ ಕಿಶೋರ್ ಅವರೊಂದಿಗಿನ ಪ್ರಸ್ತುತಿ ಮತ್ತು ಚರ್ಚೆಯ ನಂತರ, ಕಾಂಗ್ರೆಸ್ ಅಧ್ಯಕ್ಷರು 2024ರ ಸಶಕ್ತ ಕ್ರಿಯಾ ಗುಂಪನ್ನು ರಚಿಸಿದ್ದಾರೆ ಮತ್ತು ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಗುಂಪಿನ ಭಾಗವಾಗಿ ಪಕ್ಷವನ್ನು ಸೇರಲು ಅವರನ್ನ ಆಹ್ವಾನಿಸಿದ್ದಾರೆ.

ಅವರ ಪ್ರಯತ್ನ ಮತ್ತು ಪಕ್ಷಕ್ಕೆ ನೀಡಿದ ಸಲಹೆಗಳನ್ನು ನಾವು ಶ್ಲಾಘಿಸುತ್ತೇವೆ’ ಎಂದು ರಣದೀಪ್ ಸುರ್ಜೇವಾಲಾ ಹೇಳಿದರು.