ನವದೆಹಲಿ: ಶೀಘ್ರದಲ್ಲೇ 31 ಪ್ರಿಡೇಟರ್ ಡ್ರೋನ್ಗಳು(Predator drones) ಭಾರತದ ರಕ್ಷಣಾ ಪಡೆಗೆ ಸೇರ್ಪಡೆಯಾಗಲಿದ್ದು, ಈ ಸಂಬಂಧ ಭಾರತ ಮತ್ತು ಅಮೆರಿಕ ಮಹತ್ವದ ಒಪ್ಪಂದಕ್ಕೆ ಸಹಿ(India-America Sign Deal) ಹಾಕಿವೆ. 31 ಪ್ರಿಡೇಟರ್ ಡ್ರೋನ್ಗಳ ಖರೀದಿಗೆ ಭಾರತ ಅಮೆರಿಕದ ಜತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದ್ದಾರೆ. ಭಾರತೀಯ ನೌಕಾಪಡೆಯು 15 ಸೀ ಗಾರ್ಡಿಯನ್ ಡ್ರೋನ್ಗಳನ್ನು ಪಡೆಯುತ್ತದೆ ಆದರೆ ಭಾರತೀಯ ವಾಯುಪಡೆ ಮತ್ತು ಸೇನೆಯು ತಲಾ ಎಂಟು ಸ್ಕೈ ಗಾರ್ಡಿಯನ್ ಡ್ರೋನ್ಗಳನ್ನು ಪಡೆಯಲಿವೆ.
₹ 32000 ಕೋಟಿ ಒಪ್ಪಂದದ ಅಡಿಯಲ್ಲಿ, ಭಾರತದಲ್ಲಿ ನಿರ್ವಹಣೆ, ದುರಸ್ತಿ ಸೌಲಭ್ಯವನ್ನು ಸಹ ಪ್ರಾರಂಭಿಸಲಾಗುವುದು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಉಭಯ ರಾಷ್ಟ್ರಗಳ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭದ್ರತಾ ಕ್ಯಾಬಿನೆಟ್ ಸಮಿತಿ (CCS) ಕಳೆದ ವಾರ 31 ಪ್ರಿಡೇಟರ್ ಡ್ರೋನ್ಗಳನ್ನು ಖರೀದಿ ಮಾಡಲು ಅನುಮೋದನೆ ನೀಡಿತು.
ಮಿಲಿಟರಿ ಮತ್ತು ಕಾರ್ಪೊರೇಟ್ ಅಧಿಕಾರಿಗಳ ಅಮೇರಿಕನ್ ತಂಡವು ಈ ಒಪ್ಪಂದಗಳ ಭಾಗವಾಗಿ ಭಾರತಕ್ಕೆ ಬಂದಿದೆ. ನೌಕಾಪಡೆ ಜಂಟಿ ಕಾರ್ಯದರ್ಶಿ ಮತ್ತು ಸ್ವಾಧೀನ ವ್ಯವಸ್ಥಾಪಕರು ಸೇರಿದಂತೆ ಭಾರತದ ಉನ್ನತ ರಕ್ಷಣಾ ಅಧಿಕಾರಿಗಳು ಈ ಒಪ್ಪಂದದ ವೇಳೆ ಉಪಸ್ಥಿತರಿದ್ದರು. ಭಾರತವು ಹಲವು ವರ್ಷಗಳಿಂದ ಅಮೆರಿಕ ಜತೆ ಈ ಒಪ್ಪಂದದ ಬಗ್ಗೆ ಚರ್ಚೆ ಮಾಡುತ್ತಲೇ ಇತ್ತು. ಕೆಲವವು ವಾರಗಳ ಹಿಂದೆಯಷ್ಟೇ ಈ ಮಹತ್ವದ ಒಪ್ಪಂದ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು.
ಪ್ರಿಡೇಟರ್ ಡ್ರೋನ್ಗಳು ಯಾವುವು?
MQ-9B ‘ಹಂಟರ್-ಕಿಲ್ಲರ್’ ಡ್ರೋನ್ಗಳು ಸಶಸ್ತ್ರ ಪಡೆಗಳ ಕಣ್ಗಾವಲು ಉಪಕರಣವನ್ನು ವಿಶೇಷವಾಗಿ ಭಾರತ-ಚೀನಾ ಗಡಿ ಭಾಗದಲ್ಲಿ ನೀಯೋಜಿಸಲಾಗುತ್ತದೆ. ಕಳೆದ ವರ್ಷ ಜೂನ್ನಲ್ಲಿ, ರಕ್ಷಣಾ ಸಚಿವಾಲಯವು MQ-9B ಪ್ರಿಡೇಟರ್ ಸಶಸ್ತ್ರ ಡ್ರೋನ್ಗಳನ್ನು US ನಿಂದ ಖರೀದಿಸಲು ಅನುಮೋದನೆ ಸಿಕ್ಕಿತ್ತು.
MQ-9B ಡ್ರೋನ್ MQ-9 “ರೀಪರ್” ನ ಒಂದು ರೂಪಾಂತರವಾಗಿದೆ. ಇದನ್ನು ಜುಲೈ 2022 ರಲ್ಲಿ ಕಾಬೂಲ್ನ ಹೃದಯಭಾಗದಲ್ಲಿ ಅಲ್-ಖೈದಾ ನಾಯಕ ಅಯ್ಮನ್ ಅಲ್-ಜವಾಹಿರಿಯನ್ನು ಹೊಡೆದುರುಳಿಸುವಲ್ಲಿ ಬಳಕೆಯಾಗಿತ್ತು. ಈ ಅತ್ಯಂತ ಎತ್ತರದಲ್ಲಿ ಡ್ರೋನ್ಗಳು 35 ಗಂಟೆಗಳ ಕಾಲ ಗಾಳಿಯಲ್ಲಿ ಉಳಿಯುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ನಾಲ್ಕು ಹೆಲ್ಫೈರ್ ಕ್ಷಿಪಣಿಗಳು ಮತ್ತು ಸುಮಾರು 450 ಕೆಜಿ ಬಾಂಬ್ಗಳನ್ನು ಸಾಗಿಸಬಲ್ಲವು.
ಈ ಸುದ್ದಿಯನ್ನೂ ಓದಿ: India Canada row: ಬಿಷ್ಣೋಯ್ ಗ್ಯಾಂಗ್ ಜೊತೆ ಭಾರತದ ಏಜೆಂಟ್ಗಳಿಗೆ ನಂಟು; ಕೆನಡಾ ಗಂಭೀರ ಆರೋಪ