Wednesday, 30th October 2024

Pregnancy Tips: ನುಗ್ಗೆಕಾಯಿಯನ್ನು ಗರ್ಭಿಣಿಯರು ಸೇವಿಸಬಹುದೆ?

Pregnancy Tips

ಗರ್ಭಾವಸ್ಥೆಯಲ್ಲಿ ಪ್ರತಿಯೊಬ್ಬ ಮಹಿಳೆ ತನ್ನ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಬೇಕಾಗುತ್ತದೆ.  ಗರ್ಭಧಾರಣೆಯ ಒಂಬತ್ತು ತಿಂಗಳಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ.  ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳದಿದ್ದರೆ, ಅದು ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗರ್ಭಿಣಿಯರು ತಮ್ಮ  ಮತ್ತು ತಮ್ಮ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ತಮ್ಮ ಆರೋಗ್ಯದ ಬಗ್ಗೆ ಗಮನಕೊಡಬೇಕಾಗುತ್ತದೆ. ಹಾಗಾಗಿ ಅವರು  ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಕು. ಹಾಗಾದ್ರೆ ಗರ್ಭಾವಸ್ಥೆಯಲ್ಲಿ ನುಗ್ಗೆಕಾಯಿಯನ್ನು ಸೇವಿಸಿದರೆ, ಅದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿಯಿರಿ.

Pregnancy Tips
  • ನುಗ್ಗೆಕಾಯಿಯಲ್ಲಿ ವಿಟಮಿನ್‍ಗಳು, ಖನಿಜಗಳ ಜೊತೆಗೆ ಅನೇಕ ಅಗತ್ಯ ಪೋಷಕಾಂಶಗಳಿವೆ. ಇದು ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವನ್ನು ಪೋಷಿಸಲು ಸಹಾಯ ಮಾಡುತ್ತದೆ.
  • ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚಾಗಿ ಹಿಮೋಗ್ಲೋಬಿನ್ ಕೊರತೆಯನ್ನು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ, ನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣವಿದೆ. ಇದು ಗರ್ಭಾವಸ್ಥೆಯಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
Pregnancy Tips
  • ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ನುಗ್ಗೆಕಾಯಿಯನ್ನು ಆಯುರ್ವೇದದಲ್ಲಿ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದರ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ಫೈಬರ್ ಮತ್ತು ಇತರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ನುಗ್ಗೆಕಾಯಿಯಲ್ಲಿ ಪ್ರೋಟೀನ್ ಅಂಶವೂ ಸಮೃದ್ಧವಾಗಿದೆ. ಇದು  ತಾಯಿ ಮತ್ತು ಮಗುವಿನ ಬೆಳವಣಿಗೆಗೆ ಅಗತ್ಯವಾಗಿದೆ.
  • ಅನೇಕ ರೀತಿಯ ಅಗತ್ಯ ಆ್ಯಂಟಿ ಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿರುವ ನುಗ್ಗೆಕಾಯಿಯನ್ನು ತಿನ್ನುವುದರಿಂದ  ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದು ದೇಹಕ್ಕೆ ಇತರ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ನುಗ್ಗೆಕಾಯಿಯಲ್ಲಿ ಕಂಡುಬರುವ ಅಂಶಗಳು ಗರ್ಭಿಣಿಯರಲ್ಲಿ ಕಾಡುವ  ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತು ಇದರ ಸೇವನೆಯು ಹೃದಯದ ಆರೋಗ್ಯವನ್ನು ಸಹ ಸುಧಾರಿಸುತ್ತದೆ.
Pregnancy Tips
  • ಗರ್ಭಾವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರು ಮಧುಮೇಹ ಸಮಸ್ಯೆಗೆ ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನುಗ್ಗೆಕಾಯಿಯಲ್ಲಿ ಕಂಡುಬರುವ ಕೆಲವು ಅಂಶಗಳು ಮಧುಮೇಹವನ್ನು ನಿಯಂತ್ರಿಸಲು ಮತ್ತು ಅದರ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ನುಗ್ಗೆಕಾಯಿಯಲ್ಲಿರುವ ಅಂಶಗಳು ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ, ಇದರಿಂದ ಗರ್ಭಾವಸ್ಥೆಯಲ್ಲಿ ಹೆಚ್ಚು ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ.

ಇದನ್ನೂ ಓದಿ:ಮಾಜಿ ಸಂಗಾತಿಯೊಂದಿಗಿನ ಸಂಪರ್ಕ ಸರಿನಾ, ತಪ್ಪಾ?

ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುಧಾರಿಸಲು ನುಗ್ಗೆಕಾಯಿ ಸಹಾಯ ಮಾಡುತ್ತದೆ. ಆದಾಗ್ಯೂ ಗರ್ಭಾವಸ್ಥೆಯಲ್ಲಿ ನುಗ್ಗೆಕಾಯಿಯನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇಲ್ಲವಾದರೆ ಇದರಿಂದ ಸಮಸ್ಯೆಯಾಗಬಹುದು.