Friday, 22nd November 2024

Pregnancy Tips: ಗರ್ಭಿಣಿಯರೇ, ಈ 5 ಸಮಸ್ಯೆಗಳಿದ್ದಾಗ ದೈಹಿಕ ಸಂಬಂಧ ಬೆಳೆಸಬೇಡಿ!

Pregnancy Tips

ಗರ್ಭಧಾರಣೆಯು(Pregnancy Tips) ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಂತ ಸುಂದರ ಕ್ಷಣವಾಗಿದೆ. ಆದರೆ, ಈ ಸಮಯದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ, ಮಹಿಳೆಯರಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ. ಹಾಗಾಗಿ ಈ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಇಲ್ಲವಾದರೆ ಅದರ ಪರಿಣಾಮ ಹೊಟ್ಟೆಯೊಳಗಿರುವ ಮಗುವಿನ ಮೇಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ  ಲೈಂಗಿಕತೆ ಹೊಂದುವಾಗ ಜಾಗೃತೆ ವಹಿಸಬೇಕು. ಸ್ತ್ರೀರೋಗತಜ್ಞರಾದ ಡಾ. ರಿಚಾ ಸಿಂಘಾಲ್ ಅವರು ತಿಳಿಸಿದಂತೆ ಗರ್ಭಾವಸ್ಥೆಯಲ್ಲಿ ಲೈಂಗಿಕತೆಯನ್ನು ಯಾವಾಗ ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ-

ಲೈಂಗಿಕವಾಗಿ ಹರಡುವ ಸೋಂಕುಗಳು:
ನೀವು ಅಥವಾ ನಿಮ್ಮ ಸಂಗಾತಿ ಲೈಂಗಿಕವಾಗಿ ಹರಡುವ ಸೋಂಕನ್ನು ಹೊಂದಿದ್ದರೆ, ಅಂತಹ ಸಂದರ್ಭದಲ್ಲಿ ನೀವು ಗರ್ಭಾವಸ್ಥೆಯಲ್ಲಿ ದೈಹಿಕ ಸಂಬಂಧವನ್ನು ಹೊಂದುವುದನ್ನು ತಪ್ಪಿಸಬೇಕು. ಈ ವೇಳೆ ನೀವು  ಲೈಂಗಿಕ ಕ್ರಿಯೆ ನಡೆಸುವುದರಿಂದ ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಮಹಿಳೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದರೂ, ಆ ವೇಳೆ ದೈಹಿಕ ಸಂಬಂಧಗಳನ್ನು ಹೊಂದಬಾರದು.

Pregnancy Tips

ಗರ್ಭಧಾರಣೆಯ ಮೂರನೇ ತ್ರೈಮಾಸಿಕ:
ಗರ್ಭಧಾರಣೆಯ ಮೂರನೇ ತ್ರೈಮಾಸಿಕದವರೆಗೆ  ಲೈಂಗಿಕ ಕ್ರಿಯೆ ನಡೆಸುವುದನ್ನು ತಪ್ಪಿಸಿ. ಯಾಕೆಂದರೆ ಈ ಸಮಯದಲ್ಲಿ, ದೈಹಿಕ ಸಂಭೋಗದಿಂದ ಪಡೆದ ಪರಾಕಾಷ್ಠೆಯಿಂದಾಗಿ ಗರ್ಭಾಶಯವು ಕುಗ್ಗಬಹುದು. ಇದರಿಂದ ಗರ್ಭಪಾತವಾಗಬಹುದು.   

ಗರ್ಭಧರಿಸುವಲ್ಲಿ ತೊಂದರೆ:
ಕೆಲವು ಮಹಿಳೆಯರಿಗೆ ಬೇಗ ಗರ್ಭ ನಿಲ್ಲುವುದಿಲ್ಲ. ಅಂತಹ ಸಂದರ್ಭದಲ್ಲಿ ತಡವಾಗಿ ಗರ್ಭಿಣಿಯಾದಾಗ ಅಂಥವರು ಈ ಸಮಯದಲ್ಲಿ ಲೈಂಗಿಕತೆ ಹೊಂದುವುದು ತಪ್ಪಿಸಿ.  ಅಥವಾ ನಿಮಗೆ ಈ ಹಿಂದೆ ಗರ್ಭಪಾತವಾಗಿದ್ದರೆ, ಗರ್ಭ ಧರಿಸಿದ ಬಳಿಕ ನೀವು ಲೈಂಗಿಕ ಕ್ರಿಯೆ ನಡೆಸುವುದನ್ನು ತಪ್ಪಿಸಿ.

ರಕ್ತಸ್ರಾವ
ಗರ್ಭಾವಸ್ಥೆಯಲ್ಲಿ ರಕ್ತಸ್ರಾವವಾಗುತ್ತಿದ್ದರೆ, ದೈಹಿಕ ಸಂಬಂಧ ಹೊಂದುವುದನ್ನು ತಪ್ಪಿಸಿ. ರಕ್ತಸ್ರಾವದ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸಮಸ್ಯೆಯನ್ನು ಹೆಚ್ಚಿಸುತ್ತದೆ.  ಈ ಸ್ಥಿತಿಯು ಗಂಭೀರವಾಗಬಹುದು ಮತ್ತು ಗರ್ಭದಲ್ಲಿರುವ ಮಗುವಿಗೆ ಅಪಾಯವನ್ನುಂಟುಮಾಡಬಹುದು.

ಹೆರಿಗೆಗೆ  ಕೆಲವು ದಿನಗಳ ಮೊದಲು
ನಿಮ್ಮ ಹೆರಿಗೆ ದಿನಾಂಕ ಹತ್ತಿರದಲ್ಲಿದ್ದಾಗ ದೈಹಿಕ ಸಂಬಂಧವನ್ನು ಹೊಂದುವುದನ್ನು ತಪ್ಪಿಸಿ. ಈ ಸಮಯದಲ್ಲಿ ನೀವು ದೈಹಿಕ ಸಂಬಂಧಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇಲ್ಲವಾದರೆ  ಇದು ಮಗುವಿಗೆ ಹಾನಿ ಮಾಡಬಹುದು.

ಇದನ್ನೂ ಓದಿ:ಹಲ್ಲು ಕ್ಲೀನಾಗಲಿ ಎಂದು ಸಿಕ್ಕಾಪಟ್ಟೆ ಬ್ರಷ್ ಮಾಡುತ್ತಿದ್ದೀರಾ? ಹುಷಾರು!

ನೀವು ಗರ್ಭಿಣಿಯಾಗಿದ್ದರೆ, ಮೇಲೆ ತಿಳಿಸಿದ ಈ ಸಂದರ್ಭಗಳಲ್ಲಿ ದೈಹಿಕ ಸಂಬಂಧವನ್ನು ಹೊಂದುವುದನ್ನು ತಪ್ಪಿಸಿ. ಮತ್ತು ಸಂಬಂಧ ಹೊಂದುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.