Monday, 18th November 2024

Pregnancy Tips: ಗರ್ಭಿಣಿಯರು 7 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಏನಾಗುತ್ತದೆ?

Pregnancy Tips

ಹುಟ್ಟಲಿರುವ ಮಗು ಆರೋಗ್ಯವಾಗಿರಬೇಕೆಂದು ಎಲ್ಲಾ ತಾಯಂದಿರು ಬಯಸುತ್ತಾರೆ. ಅದಕ್ಕಾಗಿ ಗರ್ಭಾವಸ್ಥೆಯಲ್ಲಿ ಪೋಷಕಾಂಶಯುಕ್ತ ಆಹಾರ, ನೀರು, ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಾರೆ. ಅದರ ಜೊತೆಗೆ ಅವರು ರಾತ್ರಿ ನಿದ್ರೆ ಕೂಡ ಚೆನ್ನಾಗಿ ಮಾಡಬೇಕಾಗುತ್ತದೆ. ಯಾಕೆಂದರೆ  ಗರ್ಭಾವಸ್ಥೆಯಲ್ಲಿ(Pregnancy Tips) ತಾಯಿ ಏಳು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆಯಾಗುತ್ತದೆ ಎಂದು ಅಧ್ಯಯನವೊಂದರಲ್ಲಿ ತಿಳಿಸಲಾಗಿದೆ.

Pregnancy Tips

“ಗರ್ಭಾವಸ್ಥೆಯಲ್ಲಿ ಉತ್ತಮ ನಿದ್ರೆಯನ್ನು ರೂಢಿಸಿಕೊಂಡರೆ ಮಗುವಿನ  ಬೆಳವಣಿಗೆಯಲ್ಲಿ ಸಮಸ್ಯೆಯಾಗುವುದನ್ನು ತಡೆಯಬಹುದೇ” ಎಂಬ ಬಗ್ಗೆ ಸಂಶೋಧನೆ ನಡೆಸಲಾಗಿತ್ತು. ಇದರಿಂದ ತಿಳಿದ ಬಂದ ವಿಚಾರವೇನೆಂದರೆ ಸಾಕಷ್ಟು ನಿದ್ರೆ (ಏಳು ಗಂಟೆಗಳ ಕಾಲ ನಿದ್ರೆ)ಮಾಡದ ಗರ್ಭಿಣಿಯರು ಬೆಳವಣೆಗೆಯಲ್ಲಿ ಸಮಸ್ಯೆ ಇರುವ ಮಕ್ಕಳನ್ನು ಹೊಂದುವ ಅಪಾಯ ಹೆಚ್ಚಾಗಿದೆ ಎನ್ನಲಾಗಿದೆ. ಈ ವರದಿ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ & ಮೆಟಬಾಲಿಸಂನಲ್ಲಿ ಪ್ರಕಟವಾಗಿದೆ. ಅಲ್ಲದೇ ಈ ಸಂಶೋಧನೆಯ ಪ್ರಕಾರ,  ಹಾರ್ಮೋನುಗಳ ಬದಲಾವಣೆಗಳು, ಗರ್ಭಧಾರಣೆಯ ಸಮಸ್ಯೆ, ಆಗಾಗ್ಗೆ ಮೂತ್ರವಿಸರ್ಜನೆ ಮತ್ತು ಇತರ ಕಾರಣಗಳಿಂದಾಗಿ ಗರ್ಭಿಣಿಗೆ ರಾತ್ರಿ  ನಿದ್ರೆ ಮಾಡಲು ತೊಂದರೆಯಾಗಬಹುದು ಎನ್ನಲಾಗಿದೆ.

ಸುಮಾರು 40% ನಷ್ಟು ಗರ್ಭಿಣಿಯರು ನಿದ್ರೆಯ ಸಮಸ್ಯೆಯನ್ನು ಹೊಂದಿರುತ್ತಾರೆ ಎಂದು ವರದಿಯಾಗಿದೆ. ಇದರಿಂದಾಗಿ ಈ ಮಹಿಳೆಯರಲ್ಲಿ ಇನ್ಸುಲಿನ್ ಪ್ರತಿರೋಧ ಮತ್ತು ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆ ಕಾಡುತ್ತದೆ ಮತ್ತು ಇದರಿಂದ ಅವರ ಮಕ್ಕಳು ಸರಿಯಾಗಿ ಬೆಳವಣಿಗೆ ಹೊಂದದೆ ಸಮಸ್ಯೆಗಳನ್ನು ಅನುಭವಿಸುವ ಅಪಾಯ ಹೆಚ್ಚಾಗಿದೆ ಎಂದಿದ್ದಾರೆ. ಇಂತಹ  ಮಕ್ಕಳು ಮಾತನಾಡುವ, ಚಲಿಸುವ, ಇತರರೊಂದಿಗೆ ಸಂವಹನ ಮಾಡುವ ಸಾಮರ್ಥ್ಯ ಮತ್ತು ಗ್ರಹಿಕೆ ಕೌಶಲ್ಯಗಳನ್ನು ಪಡೆದುಕೊಳ್ಳುವಂತಹ ಕ್ರಿಯೆಗಳು ನಿಧಾನವಾಗಿ ಆಗುತ್ತದೆ ಎಂಬುದಾಗಿ ತಿಳಿದುಬಂದಿದೆ.

Pregnancy Tips

ಹಾಗಾಗಿ ಈ ಅಧ್ಯಯನವು ಗರ್ಭಾವಸ್ಥೆಯಲ್ಲಿ ನಿದ್ರೆ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಈ  ಮೂಲಕ ಗರ್ಭಾವಸ್ಥೆಯಲ್ಲಿ ತಾಯಿ ಆರೋಗ್ಯಕರವಾದ ಅಭ್ಯಾಸಗಳನ್ನು ರೂಡಿಸಿಕೊಂಡು ಆರೋಗ್ಯಕರವಾದ ಮಕ್ಕಳನ್ನು ಪಡೆಯಿರಿ ಎಂದು ಈ ಅಧ್ಯಯನದ ನೇತೃತ್ವ ವಹಿಸಿರುವ ಡಾ.ಪೆಂಗ್ ಝು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಹೃದಯಾಘಾತಕ್ಕೆ ಒಳಗಾದ ಯುವಕ; ಸಿಪಿಆರ್ ಮೂಲಕ ಜೀವ ಉಳಿಸಿದ ಕಾನ್‌ಸ್ಟೇಬಲ್‌

ಅಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿ ಸಾಕಷ್ಟು ನಿದ್ರೆ ಮಾಡದೆ ಇರುವುದು ಮಕ್ಕಳಲ್ಲಿ ಮೆದುಳಿನ ಅಂಗಗಳ ಬೆಳವಣಿಗೆಯಲ್ಲಿ  ಸಮಸ್ಯೆಯಾಗಿದ್ದು, ಇದು ಅವರ ಅರಿವಿನ ಸಾಮರ್ಥ್ಯಗಳು, ನಡವಳಿಕೆಯ ಅಭಿವೃದ್ಧಿ ಮತ್ತು ಕಲಿಕೆಯ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಗರ್ಭಾವಸ್ಥೆಯಲ್ಲಿ ತಮ್ಮ ತಾಯಂದಿರು ನಿದ್ರೆಯ ಸಮಸ್ಯೆ ಅನುಭವಿಸಿದಾಗ ಹೆಚ್ಚು  ಗಂಡು ಮಕ್ಕಳ ಬೆಳವಣಿಗೆಯಲ್ಲಿ ಸಮಸ್ಯೆಯಾಗಿರುವುದು ಅಧ್ಯಯನದಲ್ಲಿ ತೋರಿಬಂದಿದೆ.

_