Thursday, 12th December 2024

ಭಾರತದ 15ನೇ ರಾಷ್ಟ್ರಪತಿ ? ಕೆಲವೇ ಗಂಟೆಗಳಲ್ಲಿ ಫಲಿತಾಂಶ…

ನವದೆಹಲಿ: ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಜು.18ರಂದು ನಡೆದ ಚುನಾವಣೆಯ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ.

ಎಲ್ಲ ರಾಜ್ಯಗಳ ಮತಪೆಟ್ಟಿಗೆಗಳು ಸಂಸತ್ತಿನಲ್ಲಿದ್ದು, ರೂಮ್​ ನಂಬರ್ 63ರಲ್ಲಿ ಮತಎಣಿಕೆ ನಡೆಯುತ್ತಿದೆ. ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಫಲಿತಾಂಶ ಹೊರ ಬೀಳಲಿದೆ.

ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 99 ಮತದಾನ ಆಗಿತ್ತು. ಸಂಸದರು ಮತ್ತು ವಿಧಾಸಸಭಾ ಸದಸ್ಯರು ಸೇರಿ 4,800 ಮಂದಿ ಈ ಚುನಾವಣೆಯ ಮತದಾರರಾಗಿದ್ದರು. ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು, ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ.