Sunday, 8th September 2024

ಇಂದು ಸಂಜೆ ರಾಷ್ಟ್ರಪತಿ ಕೋವಿಂದ್ ಭಾಷಣ

#President of India

ನವದೆಹಲಿ: ಜನವರಿ 26 ರಂದು ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಇಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಸಂಜೆ 7 ಗಂಟೆಗೆ ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ವಾಹಿನಿಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಯಲ್ಲಿ ನೇರ ಪ್ರಸಾರವಾಗುತ್ತದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣವನ್ನು ದೂರದರ್ಶನದ ಎಲ್ಲ ಪ್ರಾದೇಶಿಕ ಚಾನೆಲ್‌ಗಳಲ್ಲಿ ಭಾಷಣದ ನಂತರ ಅನುವಾದ ಪ್ರಸಾರವಾಗಲಿದೆ. ಆಕಾಶವಾಣಿ ರಾತ್ರಿ 9.30ಕ್ಕೆ ಪ್ರಾದೇಶಿಕ ಭಾಷೆಗಳಲ್ಲಿ ರಾಷ್ಟ್ರಪತಿ ಭಾಷಣವನ್ನು ಪ್ರಸಾರ ಮಾಡಲಿದೆ.

ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ದೇಶ 73 ವರ್ಷಗಳಲ್ಲಿ ಮಾಡಿರುವ ಸಾಧನೆ, ಮುಂದಿನ ದಿನಗಳಲ್ಲಿನ ಸವಾಲುಗಳ ಬಗ್ಗೆ ವಿವರಿಸಲಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಸಮಾರಂಭ ಸರಳವಾಗಿ ಸಾಂಕೇತಿಕವಾಗಿ ನಡೆಯಲಿದೆ. ಗಣರಾಜ್ಯೋತ್ಸವ ದಿನ ದೆಹಲಿಯ ರಾಜಪಥ್ ಮಾರ್ಗದಲ್ಲಿ ಸಾಗಲಿರುವ ಸ್ತಬ್ಧಚಿತ್ರಗಳ ಸಂಖ್ಯೆ 144ರಿಂದ ಈ ವರ್ಷ 96ಕ್ಕೆ ಇಳಿದಿದೆ.

ಪರೇಡ್ ನಲ್ಲಿ ಭಾರತದ ಮಿಲಿಟರಿಯ ಹಳೆ ಮತ್ತು ಹೊಸ ಯುಗವನ್ನು ಅದರ ಯೋಧರ ಸಮವಸ್ತ್ರ ಮತ್ತು ಶಸ್ತ್ರಾಸ್ತ್ರಗಳ ಮೂಲಕ ತೋರಿಸಲಾಗುತ್ತದೆ. ಸಾವಿರ ಡ್ರೋನ್ ಗಳು ಹಿನ್ನೆಲೆ ಸಂಗೀತದೊಂದಿಗೆ ಹಾರಾಟ ನಡೆಸಲಿವೆ. ಲೇಸರ್ ಪ್ರೊಜೆಕ್ಷನ್ ಪ್ರದರ್ಶನ ಕೂಡ ಇರಲಿದೆ.

error: Content is protected !!