ಮಯೂರ್ಭಂಜ್: ಮಹಾರಾಜ ರಾಮಚಂದ್ರ ಭಂಜದೇಯೊ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಭಾಷಣ ಮಾಡು ತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕರೆಂಟ್ ಕೈಕೊಟ್ಟಿದೆ.
ಇಡೀ ಸಭಾಂಗಣವೇ ಕತ್ತಲೆಯಲ್ಲಿ ಮುಳುಗಿ ಹೋಯಿತು. ವಿದ್ಯುತ್ ವ್ಯತ್ಯಯದಿಂದ ರಾಷ್ಟ್ರಪತಿಗಳ ಭಾಷಣಕ್ಕೆ ಅಡ್ಡಿಯಾಯಿತು.
ಮಯೂರ್ಭಂಜ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ರಾಷ್ಟ್ರಪತಿಗಳು ಇಂದು ನಡೆದ ಮಹಾರಾಜ ಶ್ರೀರಾಮಚಂದ್ರ ಭಂಜಾ ದೇವು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿದ್ದರು.
ವೇದಿಕೆಯಲ್ಲಿ ರಾಷ್ಟ್ರಪತಿಗಳು ಭಾಷಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವಿದ್ಯುತ್ ಕೈ ಕೊಟ್ಟಿತು. ಆದರೆ, ರಾಷ್ಟ್ರಪತಿಗಳು ಮಾತ್ರ ಅದಕ್ಕೆ ಜಗ್ಗಲಿಲ್ಲ. ಕತ್ತಲಲ್ಲೆ ತಮ್ಮ ಭಾಷಣ ವನ್ನು ಮುಂದುವರೆಸಿದರು. ಅವರು ತಮ್ಮ ಅಸಮಾಧಾನವನ್ನು ಬೇರೆಯೇ ರೀತಿಯಲ್ಲಿ ವ್ಯಕ್ತಪಡಿಸಿರುವುದು ಕಂಡುಬಂತು. ಅಧಿಕಾರ ಎಂಬುದು ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ರಾಷ್ಟ್ರಪತಿ ಮುರ್ಮು ಹೇಳಿದರು.
ಒಡಿಶಾದ ಮಯೂರ್ಭಂಜ್ ಜಿಲ್ಲೆಯ ರೈರಂಗಪುರದವರಾದ ಮುರ್ಮು ಅವರನ್ನು ಮಣ್ಣಿನ ಮಗಳು ಎಂದು ಕರೆಯಲಾಗುತ್ತದೆ. ಮಾಹಿತಿಯ ಪ್ರಕಾರ, ರಾಷ್ಟ್ರಪತಿ ದ್ರೌಪದಿ ಮುರ್ಮು ತನ್ನ ಭಾಷಣವನ್ನು ಪ್ರಾರಂಭಿಸಿದ ಒಂಬತ್ತು ನಿಮಿಷಗಳ ನಂತರ ವಿದ್ಯುತ್ ಸ್ಥಗಿತಗೊಂಡಿತು.
ಉಪಕುಲಪತಿ ಸಂತೋಷ್ ಕುಮಾರ್ ತ್ರಿಪಾಠಿ ಅವರು, ರಾಷ್ಟ್ರಪತಿ ಭಾಷಣದ ವೇಳೆ ಆದ ವಿದ್ಯುತ್ ಸಮಸ್ಯೆಗೆ ಕ್ಷಮೆಯನ್ನೂ ಯಾಚಿಸಿದ್ದಾರೆ.