Thursday, 12th December 2024

ಬಿಪ್ಲಬ್ ಕುಮಾರ್ ದೇಬ್ ‘ಸರ್ವಾಧಿಕಾರಿ’: ತ್ರಿಪುರಾ ಸಿಎಂ ರಾಜೀನಾಮೆಗೆ ಆಗ್ರಹ

ನವದೆಹಲಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್‌ರನ್ನು ಸರ್ವಾಧಿಕಾರಿ ಎಂದು ಕರೆದಿರುವ ಕನಿಷ್ಟ 7 ಬಿಜೆಪಿ ಶಾಸಕರು ಅವರ ರಾಜೀನಾಮೆಗೆ ಬೇಡಿಕೆಯೊಂದಿಗೆ ದಿಲ್ಲಿಯಲ್ಲಿರು ವ ಪಕ್ಷದ ಮುಖ್ಯ ಕಚೇರಿಯತ್ತ ದೌಡಾಯಿಸಿ, ವಿಚಾರದ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದಾರೆ.

ಸುದೀಪ್ ರಾಯ್ ಬರ್ಮನ್ ನೇತೃತ್ವದ ಬಿಜೆಪಿ ಶಾಸಕರು ತಮಗೆ ಸದನದಲ್ಲಿ ಕನಿಷ್ಟ ಇನ್ನೂ ಇಬ್ಬರು ಶಾಸಕರ ಬೆಂಬಲವಿದ್ದು, ಅವರು ಕೋವಿಡ್-19ನಿಂದಾಗಿ ದಿಲ್ಲಿಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದು, 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ ಬಿಜೆಪಿಯ 36 ಶಾಸಕರಿದ್ದಾರೆ.

ಸುಶಾಂತ್ ಚೌಧರಿ, ಆಶೀಷ್ ಸಹಾ, ಆಶೀಷ್ ದಾಸ್, ದಿವಾ ಚಂದ್ರ ರಾಂಖಲ್, ಬರ್ಬ್ ಮೋಹನ್ ತ್ರಿಪುರ, ಪರಿಮಳ್ ದೇಬ್ ಬರ್ಮಾ, ರಾಮ್ ಪ್ರಸಾದ್ ಪಾಲ್ ಹಾಗೂ ಸುದೀಪ್ ರಾಯ್ ಬರ್ಮನ್ ದಿಲ್ಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಸರಕಾರ ಸುರಕ್ಷಿತವಾಗಿದೆ. ಶಾಸಕರ ದೂರನ್ನು ನಾನು ಕೇಳಿಲ್ಲ. ಬಿಜೆಪಿ ಸದಸ್ಯರುಗಳು ಪಕ್ಷದ ಹೊರಗೆ ಏನನ್ನೂ ಚರ್ಚಿಸುವುದಿಲ್ಲ ಎಂದು ತ್ರಿಪುರಾದ ಬಿಜೆಪಿ ಅಧ್ಯಕ್ಷ ಮಾಣಿಕ್ ಸಹಾ ಹೇಳಿದ್ದಾರೆ.