ನವದೆಹಲಿ: ಡ್ರೋನ್ನಂತೆ ಹಾರುವ ವಸ್ತು ಸೋಮವಾರ ನಿಷೇಧಿತ ವಲಯವಾಗಿರುವ ದೆಹಲಿಯ ಪ್ರಧಾನಿ ನಿವಾಸದ ಮೇಲೆ ಹಾರಾಟ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಘಟನೆ ನಡೆದಿದೆ. ಪ್ರಧಾನಿಗಳ ಶೇಷ ಭದ್ರತಾ ಪಡೆಯಾದ ಎಸ್ಪಿಜಿ ಕಟ್ಟೆಚ್ಚರ ವಹಿಸಿದೆ.
ನಿವಾಸದ ಮೇಲೆ ಡ್ರೋನ್ ರೀತಿಯ ವಸ್ತು ಹಾರಾಟ ನಡೆಸಿದೆ ಎಂದು ಪ್ರಧಾನಿಗೆ ಭದ್ರತೆ ನೀಡುವ ಎಸ್ಪಿಜಿ ವಿಭಾಗಕ್ಕೆ ಕರೆ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆ ಕ್ಷಣಕ್ಕೆ ಯಾವುದೇ ವಸ್ತು ಅಲ್ಲಿ ಕಂಡು ಬಂದಿರಲಿಲ್ಲ. ಬಳಿಕ ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ ಮೂಲಕ ತಪಾಸಣೆ ನಡೆಸಲಾಗಿದೆ.