Sunday, 15th December 2024

Prisoners Escape: ಕೈದಿಗಳಿಗಾಗಿ ರಾಮಲೀಲಾ ಪ್ರದರ್ಶನ; ಇದೇ ಚಾನ್ಸ್‌ ಎಂದುಕೊಂಡು ಇಬ್ಬರು ಆರೋಪಿಗಳು ಎಸ್ಕೇಪ್‌!

Prisoners Escape

ಕೈದಿಗಳಿಗಾಗಿ ಆಯೋಜಿಸಿದ್ದ ರಾಮಲೀಲಾ ಪ್ರದರ್ಶನದ (Ramlila performance) ವೇಳೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಕೈದಿಗಳು ಜೈಲಿನಿಂದ ಪರಾರಿಯಾಗಿರುವ (Prisoners Escape) ಘಟನೆ ಉತ್ತರಾಖಂಡದ (Uttarakhand) ಹರಿದ್ವಾರದ ರೋಶನಾಬಾದ್ ಜೈಲಿನಲ್ಲಿ (Roshanabad prison) ನಡೆದಿದೆ. ಶುಕ್ರವಾರ ಕೈದಿಗಳಿಗಾಗಿ ಜೈಲಿನಲ್ಲಿ ರಾಮಲೀಲಾ ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಇಬ್ಬರು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.

ಕೊಲೆ ಆರೋಪಿ ರೂರ್ಕಿ ನಿವಾಸಿ ಪಂಕಜ್ ಕುಮಾರ್ ಮತ್ತು ಅಪಹರಣ ಪ್ರಕರಣದ ಆರೋಪಿ ಉತ್ತರ ಪ್ರದೇಶದ ಗೊಂಡಾ ಮೂಲದ ರಾಮ್ ಕುಮಾರ್ ಪರಾರಿಯಾಗಿರುವ ಕೈದಿಗಳು ಎಂದು ಹರಿದ್ವಾರದ ಎಸ್‌ಎಸ್‌ಪಿ ಪ್ರಮೇಂದ್ರ ದೋಭಾಲ್ ಗುರುತಿಸಿದ್ದಾರೆ. ಪೊಲೀಸರ ಪ್ರಕಾರ ಇಬ್ಬರು ಆರೋಪಿಗಳು ರಾಮಲೀಲಾ ಪ್ರದರ್ಶನದ ವೇಳೆ ಕಟ್ಟಡದ ಆವರಣದಲ್ಲಿದ್ದ ಏಣಿಯನ್ನು ಬಳಸಿ ಜೈಲಿನ ಗೋಡೆಯನ್ನು ಏರಿ ಪರಾರಿಯಾಗಿದ್ದಾರೆ. ಜೈಲಿನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಾರಣ ಏಣಿಯನ್ನು ಅಲ್ಲೇ ಬಿಡಲಾಗಿತ್ತು ಎಂದು ತಿಳಿಸಿದ್ದಾರೆ.

ಇಬ್ಬರು ಕೈದಿಗಳು ಗೈರು ಹಾಜರಾಗಿರುವುದು ರಾತ್ರಿ 8 ಗಂಟೆಯವರೆಗೆ ಸೆರೆಮನೆಯ ಅಧಿಕಾರಿಗಳು ಗಮನಿಸಿರಲಿಲ್ಲ.
ದೋಭಾಲ್ ಪ್ರಕಾರ, ಶನಿವಾರ ಬೆಳಗ್ಗೆ 6.30ಕ್ಕೆ ಕೈದಿಗಳು ನಾಪತ್ತೆಯಾಗಿರುವುದು ತಿಳಿದು ಅವರನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಯಿತು. ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರನ್ನೂ ಹುಡುಕಲಾಗುತ್ತಿದ್ದು, ಶೀಘ್ರದಲ್ಲೇ ಪತ್ತೆ ಹಚ್ಚುವುದಾಗಿ ಎಸ್‌ಎಸ್‌ಪಿ ತಿಳಿಸಿದರು.

Murder Case: ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ; ಯುವಕನನ್ನು ಕೊಚ್ಚಿ ಕೊಂದ ಪತಿ!

ಘಟನೆಯ ವರದಿಯಲ್ಲಿ ವಿಳಂಬದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದ್ದು, ಬೆಳಗ್ಗೆ ನಮಗೆ ಮಾಹಿತಿ ನೀಡಲಾಗಿದೆ ಎಂದು ದೋಭಾಲ್ ಹೇಳಿದರು. ಘಟನೆಯ ವೇಳೆ ರಜೆಯಲ್ಲಿದ್ದ ಜೈಲರ್ ಮನೋಜ್ ಆರ್ಯ ರಜೆಯಲ್ಲಿದ್ದರು ಎನ್ನಲಾಗಿದೆ.