ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಕಾಂಗ್ರೆಸ್ ನಾಯಕಿ ಹಾಗೂ ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ವಾದ್ರಾ ಅವರು ಮಂಗಳವಾರ ವಿಶಿಷ್ಟವಾದ ಬ್ಯಾಗ್ ಒಂದನ್ನು ತೆಗೆದು ಕೊಂಡು ಬಂದಿದ್ದು, ಸದ್ಯ ಅದರ ಫೋಟೋಗಳು ವೈರಲ್ ಆಗಿದೆ. ಬ್ಯಾಗ್‌ನ ಒಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉದ್ಯಮಿ ಗೌತಮ್ ಅದಾನಿ (Gautam Adani) ಅವರ ಚಿತ್ರ ಮತ್ತು ಇನ್ನೊಂದು ಬದಿಯಲ್ಲಿ “ಮೋದಿ ಅದಾನಿ ಭಾಯ್ ಭಾಯಿ” ಎಂಬ ಘೋಷಣೆಯನ್ನು ಮುದ್ರಿಸಲಾಗಿದೆ.
संसद में @priyankagandhi ने इस बार मोदी – अडानी भाई भाई लिखे हुए बैग से सरकार को घेरा #Adani #Modi pic.twitter.com/w6GrA162yV
— Deepansh Yadav | दीपांश यादव 🇮🇳 (@deepansh_news) December 10, 2024
ಸಂಸತ್ತಿಗೆ ಈ ಚಿತ್ರವನ್ನು ಒಳಗೊಂಡ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಕೇಂದ್ರ ಸರ್ಕಾರವನ್ನು ಅಣುಕಿಸಿದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಗೌತಮ್ ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕ್ಯೂಟ್ ಎಂದ ರಾಹುಲ್
ಪ್ರಿಯಾಂಕಾ ಬಳಿ ಇರುವ ಬ್ಯಾಗ್‌ನ್ನು ಗಮನಿಸಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೋದಿ ಹಾಗೂ ಅದಾನಿ ಇರುವ ಬ್ಯಾಗನ್ನು ವೀಕ್ಷಿಸಿ ಸೋ ಕ್ಯೂಟ್ ಎಂದು ಹೇಳಿದ್ದಾರೆ.
Priyanka Gandhi Ji was carrying a special bag with image of Modi-Adani and slogan of ‘Modi Adani Bhai Bhai’.
— Shantanu (@shaandelhite) December 10, 2024
“Who has designed that?”, LoP Rahul Gandhi Ji asked when he noticed that…😀 pic.twitter.com/t7Dh34M4qn
ಇತ್ತೀಚೆಗೆ ಅಮೆರಿಕ ಅದಾನಿ ವಿರುದ್ಧ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿತ್ತು. ಅದಾನಿ ವಿರುದ್ಧ ಅಮೆರಿಕ ನ್ಯಾಯಾಲಯ ಬಂಧನ ವಾರಂಟ್ ಕೂಡ ಜಾರಿ ಮಾಡಿದೆ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಇದೇ ವಿಷಯವನ್ನಿಟ್ಟುಕೊಂಡು ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಯೋಜನೆಯನ್ನು ಇಂಡಿ ಮೈತ್ರಿ ಕೂಟ ಹಾಕಿಕೊಂಡಿದೆ. ಪ್ರತಿಪಕ್ಷದ ಬಗ್ಗೆ ಆರೋಪಿಸಿರುವ ಅವರು ಅದಾನಿ ಕೇಸ್ ಬಗ್ಗೆ ಮಾತನಾಡಲು ಸರ್ಕಾರ ತಯಾರಿಲ್ಲ. ಹಗರಣಕೋರರನ್ನು ಸರ್ಕಾರ ರಕ್ಷಿಸಿಸುತ್ತಿದೆ ಎಂದು ಆರೋಪಿಸಿದೆ.
प्रियंका संसद आएगी तो क्रांति हो जाएगी।
— Baliyan (@Baliyan_x) December 10, 2024
इधर बहन एक प्रिंट कराया बेग लेकर आई है और GANDOS भाई कह रहा है कि “How cute”.
ये हो रहा है भारत की संसद में- इस देश के राजनैतिक इतिहास में सबसे निम्न स्तर कर विपक्ष है। pic.twitter.com/mTg8cz5WVh
ಈ ಸುದ್ದಿಯನ್ನೂ ಓದಿ : Priyanka Gandhi: 35 ವರ್ಷಗಳಲ್ಲಿ ಇದೇ ಮೊದಲ ಬಾರಿ ನನಗಾಗಿ ಚುನಾವಣಾ ಪ್ರಚಾರ: ಪ್ರಿಯಾಂಕಾ ಗಾಂಧಿ