Friday, 22nd November 2024

ಸಚಿವೆ ಸ್ಮೃತಿ ಬಗ್ಗೆ ಅಶ್ಲೀಲ ಫೇಸ್‌ಬುಕ್ ಪೋಸ್ಟ್: ಪ್ರೊಫೆಸರ್​ ಬಂಧನ

ಫಿರೋಜಾಬಾದ್ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಅಶ್ಲೀಲ ಫೇಸ್‌ಬುಕ್ ಪೋಸ್ಟ್ ಪ್ರಕಟಿಸಿದ್ದ ಉತ್ತರಪ್ರದೇಶದ ಫಿರೋಜಾಬಾದ್​ನ ಪ್ರೊಫೆಸರ್​ ಶಹರ್ಯರ್ ಅಲಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಹೆಚ್ಚುವರಿ ಸೆಷನ್ಸ್​ ನ್ಯಾಯಾಧೀಶರ ಮುಂದೆ ಶರಣಾದ ಅಲಿ, ಜಾಮೀನು ಕೋರಿದರು. ಜಾಮೀನು ನಿರಾಕರಿಸಿದ ಕೋರ್ಟ್​ ಅವರ ಬಂಧನಕ್ಕೆ ಆದೇಶಿಸಿದೆ. ಫಿರೋಜಾಬಾದ್​ನ ಎಸ್‌ಆರ್‌ಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಹರ್ಯಾರ್ ಅಲಿ, ಕಳೆದ ಮಾರ್ಚ್​ ತಿಂಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಬಗ್ಗೆ ಅವಹೇಳನಕಾರಿ ಸಾಮಗ್ರಿಯನ್ನು ಫೇಸ್​ಬುಕ್​ ಖಾತೆಯಲ್ಲಿ ಹಾಕಿದ್ದರು.

ಬಂಧನದಿಂದ ರಕ್ಷಣೆ ಕೋರಿ, ಪ್ರೊಫೆಸರ್​ ಅಲಿ, ಅಲಹಾಬಾದ್​ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕರಿಸಲ್ಪಟ್ಟ ಮೇಲೆ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್​ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಅವರು ಸೆಷನ್ಸ್​ ನ್ಯಾಯಾಲಯದ ಮುಂದೆ ಆತ್ಮ ಸಮರ್ಪಣೆ ಮಾಡಿಕೊಂಡರು ಎನ್ನಲಾಗಿದೆ.