ಫಗ್ವಾರ: ಹಿಂದೂ ದೇವರಾದ ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಪ್ರಾಧ್ಯಾಪಕಿ ಒಬ್ಬರನ್ನು ವಜಾ ಮಾಡಲಾಗಿದೆ.
ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯ ಸಹಾಯಕ ಪ್ರೊ.ಗುರ್ಸಂಗ್ ಪ್ರೀತ್ ಕೌರ್ ಅವರು ರಾಮನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ದ್ದಾರೆ. ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರನ್ನು ತಕ್ಷಣ ಹುದ್ದೆಯಿಂದ ವಜಾ ಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾದ ವೀಡಿಯೊದಿಂದ ಕೆಲ ಮಂದಿಯ ಭಾವನೆಗಳಿಗೆ ಧಕ್ಕೆಯಾಗಿದೆ ಎನ್ನುವುದು ನಮಗೆ ಅರ್ಥವಾಗಿದೆ. ಈ ವೀಡಿಯೊದಲ್ಲಿ ನಮ್ಮ ಬೋಧಕ ಸಿಬ್ಬಂದಿಯೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡಿರುವುದು ಕೇಳಿ ಬಂದಿದೆ” ಎಂದು ಖಾಸಗಿ ವಿವಿ ಹೇಳಿದೆ.
ಅಭಿಪ್ರಾಯ ವೈಯಕ್ತಿಕವಾಗಿದ್ದು, ವಿಶ್ವವಿದ್ಯಾನಿಲಯ ಅದನ್ನು ದೃಢೀಕರಿಸುವುದಿಲ್ಲ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆ ಯಿಂದ ಮುಕ್ತಗೊಳಿಸಲಾಗಿದೆ. ಆದಾಗ್ಯೂ ಇಡೀ ಘಟನೆ ಬಗ್ಗೆ ನಾವು ತೀವ್ರ ದುಃಖ ವ್ಯಕ್ತಪಡಿಸುತ್ತೇವೆ” ಎಂದು ವಿವರಿಸಲಾಗಿದೆ.