ಕೊಯಮತ್ತೂರು: ಖಾಸಗಿ ನೀಟ್, ಜೆಇಇ ಕೋಚಿಂಗ್ ಸೆಂಟರ್ ನಡೆಸುವ ಸ್ಕಾಲರ್ ಶಿಪ್ ಪರೀಕ್ಷೆ ಬರೆದಿದ್ದ ತಮಿಳುನಾಡು ಕೃಷಿ ವಿವಿ ಪ್ರೊಫೆಸರ್ ಪುತ್ರ ಉತ್ತಮ ಅಂಕ ಗಳಿಸುವಲ್ಲಿ ವಿಫಲನಾದ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೀಟ್ ಮತ್ತು ಜೆಇಇ ಯಂತಹ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಗೆ ಕೋಚಿಂಗ್ ನಡೆಸುತ್ತಿದ್ದ ಖಾಸಗಿ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಸೀಟ್ ಪಡೆಯುವ ಸ್ಕಾಲರ್ ಶಿಪ್ ಪರೀಕ್ಷೆಗಾಗಿ ಹಾಜರಾಗಿದ್ದ ಎಂದು ವರದಿಯಾಗಿದೆ.
ಮೃತನನ್ನು ಎಂ ಧರುಣಶಂಕರ್ ಎಂದು ಗುರುತಿಸಲಾಗಿದೆ. ಪ್ರೊಫೆಸರ್ ಎಂ ಮುರುಗನ್ ಅವರ ಪುತ್ರ ನಾಗಿದ್ದು, ವಿವಿಯ ಕ್ಯಾಂಪಸ್ ನಲ್ಲಿ ಕ್ವಾರ್ಟಸ್ ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವಲ್ಲಿ ವಿಫಲತೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ, ಪೋಷಕರು ಕೂಡಾ ಆತ ಗಳಿಸಿರುವ ಅಂಕಗಳ ಬಗ್ಗೆ ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಮಧ್ಯೆ ರಾತ್ರಿ ಮನೆಯಲ್ಲಿ ಒಬ್ಬನೇ ಇರುವಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.